×
Ad

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್

ಧರ್ಮಸ್ಥಳ ಚಲೋ ಯಾತ್ರೆ

Update: 2025-08-16 23:49 IST

ಬೆಳ್ತಂಗಡಿ: ಸರಕಾರ ಎಸ್.ಐ ಟಿ ರಚಿಸಿರುವುದು ತಪ್ಪಲ್ಲ ತನಿಖೆ ನಡೆಯಲಿ ಆದರೆ ಧರ್ಮಸ್ಥಳದ ವಿರುದ್ಧ ಅನಗತ್ಯ ವಾಗಿ ಅಪಪ್ರಚಾರ ಮಾಡುವವರ ವಿರುದ್ಧ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ನೂರಾರು ಬೆಂಬಲಿಗರೊಂದಿಗೆ ಧರ್ಮಸ್ಥಳ ಚಲೋ ಯಾತ್ರೆಯ ಮೂಲಕ ಆಗಮಿಸಿದ ಅವರು ಧರ್ಮಸ್ಥಳ ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮುಸುಕುದಾರಿ ಸಾಕ್ಷಿದೂರುದಾರ ಯಾಕೆ ಮುಸುಕು ಹಾಕಿಕೊಂಡಿದ್ದಾನೆ ಆತ ಭೀಮ ಅಲ್ಲ ಚೆನ್ನಪ್ಪ ಇದು ವಿಧಾನ ಸಭೆಯಲ್ಲಿಯೂ ಬಂದಿದೆ. ಆತ ಕನ್ಸರ್ಟ್ ಆದವ ಅವನಿಗೆ ಮೂವರು ಹೆಡಂತಿಯರಿದ್ದಾರೆ ಅವನ ಮುಸುಕು ತೆಗೆದು ವಿಚಾರಣೆ ನಡೆಸಬೇಕಾಗಿದೆ ಎಂದರು. ಈಗಾಗಲೇ ಆತ ಹಲವು ಜಾಗಗಳನ್ನು ತೋರಿಸಿದ್ದಾನೆ. ವಸತಿ ಗೃಹ ಅಗೆಯಬೇಕು ಅನ್ನುತ್ತಾನೆ. ನಾಳೆ ಕ್ಷೇತ್ರ ಅಗೆಯಬೇಕು ಎಂದೂ ಹೇಳಬಹುದು ಇದನ್ನೆಲ್ಲ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಇದನ್ನು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರ ಹಿಂದೆ ವಿದೇಶೀ ಕೈವಾಡವೂ ಇರುವ ಅನುಮಾನವಿದೆ. ಹೊರದೇಶದಿಂದದಲೂ ಹಣ ಬಂದಿರಬಹುದು, ಎಸ್.ಡಿ.ಪಿ.ಐ ಅವರು ಇದರಲ್ಲಿ ಮಧ್ಯಪ್ರವೇಶಿಸುತ್ತಾರೆ ಅಂದರೆ ಅದರ ಹಿಂದಿರುವ ಸಂಚನ್ನು ಅರಿಯಲು ಸಾಧ್ಯ ಎಂದರು.

ಧರ್ಮಸ್ಥಳದ ವಿರುದ್ಧ ಯುಟ್ಯೂಬರ್ ಗಳು ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ. ಧರ್ಮಸ್ಥಳದ‌ ಪರವಾಗಿ ಯಾರೇ ಮಾತನಾಡಿದರೂ ಅವರ ತೇಜೋವಧೆಗೆ ಮುಂದಾಗುತ್ತಿದ್ದಾರೆ ಇಂತವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿಯೂ ಅವರು ತಿಳಿಸಿದರು.

ಇದು ಒಂದು ರಾಜಕೀಯ ಪಕ್ಷದ ವಿಚಾರವಲ್ಲ ಇಲ್ಲಿ ಕಾಂಗ್ರೆಸ್ ಬಿಜೆಪಿ ಎಂದಿಲ್ಲ ಕ್ಷೆತ್ರದ ವಿರುದ್ಧ ಷಡ್ಯಂತ್ರ ರೂಪಿಸು ವವರ ಬಗ್ಗೆ ತನಿಖೆಯಾಗಬೇಕ ಎಸ್.ಐ.ಟಿ ತನಿಖೆ ಮುಗಿದ ಬಳಿಕ ಮುಸುಕುದಾರಿಯನ್ನು ವಶಕ್ಕೆ ಪಡೆದು ಇದರ ಹಿಂದಿರುವವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಕ್ಷೇತ್ರದ ವಿರುದ್ಧ ಅಪಪ್ರಚಾರ ಯಾರೇ ಮಾಡಿದರು ಕ್ಷಮಿಸುವುದಿಲ್ಲ ಎಂದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News