ಧರ್ಮಸ್ಥಳ ದೂರು | ಎಸ್ ಐ ಟಿ ಯಿಂದ ಸ್ಥಳ ಮಹಜರು ಸ್ಥಗಿತ, ನಾಳೆಗೆ ಮುಂದೂಡಿಕೆ
Update: 2025-07-28 18:37 IST
ಮಂಗಳೂರು: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನ್ನು ಕರೆತಂದು ಸ್ಥಳ ಮಹಜರು ನಡೆಸಿದ ಎಸ್ ಐ ಟಿ ಪೊಲೀಸರು, ಸೋಮವಾರ ಸಂಜೆಯ ವೇಳೆಗೆ ಸ್ಥಳ ಗುರತಿಸುವಿಕೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ.
ಮಹಜರು ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸಾಕ್ಷಿ ದೂರುದಾರನ್ನು ಮಹಜರಿಗೆ ಕರೆದೊಯ್ದ ಎಸ್ ಐ ಟಿ ಪೊಲೀಸರು, 13 ಸ್ಥಳಗಳನ್ನು ಸಾಕ್ಷಿಯ ಸಹಾಯದಿಂದ ಗುರುತಿಸಿದರು ಎಂದು ತಿಳಿದು ಬಂದಿದೆ.