ಧರ್ಮಸ್ಥಳ: ಕಾರ್ಯಾಚರಣೆ ಸ್ಥಗಿತಗೊಳಿಸಿ ಹಿಂತಿರುಗಿದ ಎಸ್.ಐ.ಟಿ ತಂಡ
Update: 2025-08-06 17:56 IST
ಬೆಳ್ತಂಗಡಿ: ಇಂದಿನ ಕಾರ್ಯಾಚರಣೆ ಮುಗಿಸಿ ಎಸ್.ಐ.ಟಿ ತಂಡ ಹಿಂತಿರುಗಿದೆ. ಸ್ಥಳದಲ್ಲಿ ಯಾವುದೇ ಕಳೆಬರದ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಇಂದು ಎಸ್.ಐ.ಟಿ ತಂಡ ಸಾಕ್ಷಿ ದೂರುದಾರನೊಂದಿಗೆ ಅರಣ್ಯದ ಒಳಗೆ ತೆರಳಿದ್ದರು ಆದರೆ ಅಲ್ಲಿ ಅಗೆಯುವ ಕಾರ್ಯವನ್ನು ನಡೆಸಿದ್ದು ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ತಂಡ ಹಿಂತಿರುಗಿದೆ ಎಂದು ತಿಳಿದುಬಂದಿದೆ.