×
Ad

ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಮತ್ತು ಸರ್ವ ಜಮಾತ್ ವತಿಯಿಂದ ಮಾದಕ ವ್ಯಸನದ ಜಾಗೃತಿ ಸಭೆ

Update: 2023-09-22 23:22 IST

ಫರಂಗಿಪೇಟೆ, ಸೆ.22: ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಮತ್ತು ತುಂಬೆ ಗ್ರಾಮ, ಅಡ್ಯಾರ್ ಗ್ರಾಮ, ಪುದು ಗ್ರಾಮಕ್ಕೊಳಪಟ್ಟ ಸರ್ವ ಮಸೀದಿ ಆಡಳಿತ ಸಮಿತಿ ಸಮ್ಮುಖದಲ್ಲಿ ಮಾದಕ ವ್ಯಸನದ ಜಾಗೃತಿ ಮತ್ತು ವ್ಯಸನ ಮುಕ್ತ ಅನುಷ್ಠಾನಕ್ಕಾಗಿ ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಬ್ಬಾರ್ ಮಾರಿಪಲ್ಲ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು

ಸಭೆಯಲ್ಲಿ ವ್ಯಸನ ಮುಕ್ತ ಅಭಿಯಾನದ ಅವಲೋಕನ ಮತ್ತು ಮಸೀದಿ ಆಡಳಿತ ಸಮಿತಿ ಸದಸ್ಯರ ಅಭಿಪ್ರಾಯದಂತೆ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮುಂದಿನ ದಿನದಲ್ಲಿ ಪ್ರತೀ ಜಮಾತ್ ಮಟ್ಟದಲ್ಲಿ ನಡೆಸುವ ಜಾಗೃತಿ ಕಾರ್ಯಕ್ರಮ, ಮಾದಕ ವ್ಯಸನಕ್ಕೊಳಗಾದವರನ್ನು ಕೌನ್ಸಿಲಿಂಗ್ ಗೆ ಒಳಪಡಿಸುವುದು, ಅಗತ್ಯ ಬಂದರೆ ಚಿಕಿತ್ಸೆ ನೀಡುವುದು, ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ಇತ್ಯಾದಿ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News