×
Ad

ಫಾದರ್ ಮುಲ್ಲರ್ 27ನೆ ಬ್ಯಾಚ್ ಶೈಕ್ಷಣಿಕ ವರ್ಷದ ಕಾರ್ಯಕ್ರಮ

ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಗೆ ಚಾಲನೆ

Update: 2025-10-11 18:17 IST

ಮಂಗಳೂರು: ನಗರದ ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ವಿದ್ಯಾರ್ಥಿಗಳ ಈ ಸಾಲಿನ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಹಾಗೂ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಗೆ ಚಾಲನೆ ಸಮಾರಂಭಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆಥೋಲಿಕ್ ಶೈಕ್ಷಣಿಕ ಮಂಡಳಿಯ ಕಾರ್ಯದರ್ಶಿ ವಂ.ಡಾ|ಲಿಯೋ ಲಸ್ರಾಡೊ ಅವರು ಮಾತನಾಡುತ್ತಾ ಮೂರು ದಶಕಗಳ ಹಿಂದೆ ವೈದ್ಯರಾಗುವುದಕ್ಕೆ ತಮಗೆ ಇದ್ದ ಉತ್ಸಾಹವನ್ನು ನೆನಪಿಸಿಕೊಂಡು, ವಿದ್ಯಾರ್ಥಿಗಳು ಯಾವಾಗಲೂ ಜೀವನ ಪರ್ಯಂತ ಕಲಿಕೆ ಹಾಗೂ ಸೇವೆಯ ಪ್ರಯಾಣವನ್ನು ತಮ್ಮದಾಗಿಸಿಕೊಳ್ಳಬೇಕು. ಇತರರ ನೋವುಗಳನ್ನು ಅರಿತುಕೊಂಡು ಅವರಿಗಾಗಿ ಸೇವೆ ಸಲ್ಲಿಸುವುದರತ್ತ ಗಮನ ಹರಿಸಬೇಕು. ಅಲ್ಲದೆ ತಮ್ಮ ಹೆತ್ತವರ ಹಾಗೂ ಹಿತೈಷಿಗಳ ತ್ಯಾಗಗಳನ್ನು ಮರೆಯಬಾರದು ಎಂದರು.

ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜು ಚಿಕಿತ್ಸೆಯ ತನ್ನ ದೈವೀಕ ಅಭಿಯಾನವನ್ನು ಮುಂದುವರಿಸುತ್ತಾ ಬಂದಿದೆ. ಯಾವುದೇ ಲಾಭ ನಷ್ಟದ ಬಗ್ಗೆ ಚಿಂತಿಸದೆ ಸೇವಾ ನಿರತವಾಗಿರುವುದು ಶ್ಲಾಘನೀಯ ಎಂದರು.

ಫಾ.ಮುಲ್ಲರ್ಸ್‌ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ವಂ.ಫಾ.ಫಾವೊಸ್ತಿನ್‌ ಲ್ಯೂಕಸ್‌ ಲೋಬೊ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಚಿಕಿತ್ಸೆಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೀರಿ, ಇದು ಕೇವಲ ಜ್ಞಾನ ಮಾತ್ರವಲ್ಲದೆ ಅನುಭೂತಿ, ಮಾನವೀಯತೆ ನಿರೀಕ್ಷಿಸುತ್ತದೆ ಎಂದು ನೆನಪಿಸಿದರು.

ವೈದ್ಯಕೀಯ ವೃತ್ತಿಗೆ ಹೊಸದಾಗಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳ ಸೇರ್ಪಡೆಯನ್ನು ಸಂಕೇತಿಸುವ ವೈಟ್‌ ಕೋಟ್‌ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಘಟಕ ಮುಖ್ಯಸ್ಥ ಪ್ರೊ.ಡಾ.ನಾಗೇಶ್‌ ಕೆ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ಪ್ರತಿಜ್ಞಾವಿಧಿ ಬೋಧಿಸಿದರು.

ಸಮಾರಂಭದ ಭಾಗವಾಗಿ ಫಾ.ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ಜಾರ್ಜ್‌ ಜೀವನ್‌ ಸಿಕ್ವೇರ ಅವರು ಪ್ಲಾಸ್ಟಿಕ್‌ ಫ್ರೀ ಕ್ಯಾಂಪಸ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಫಾ.ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ವಂ.ಡಾ.ಮೈಕೇಲ್‌ ಸಾಂತುಮಯೊರ್‌ ಸ್ವಾಗತಿಸಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಆಂಟನಿ ಸಿಲ್ವನ್‌ ಡಿʼಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News