×
Ad

ಕಡಬ | ಮೇಯಲು ಬಿಟ್ಟಿದ್ದ ದನ ಸಾವು: ಆನೆ ದಾಳಿ ಶಂಕೆ

Update: 2023-12-06 12:12 IST

ಕಡಬ, ಡಿ.6: ತಾಲೂಕಿನ ಕೊಣಾಜೆ ಎಂಬಲ್ಲಿ ಮೇಯಲು ಬಿಟ್ಟಿದ್ದ ದನವೊಂದು ತೋಟದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದು, ಆನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಕೊಣಾಜೆ ದೊಡ್ಡಮನೆ ನಿವಾಸಿ ಅಶೋಕ್ ಎಂಬವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಡಲಾಗಿತ್ತು. ಸಂಜೆಯ ವೇಳೆಗೆ ಮನೆಯವರು ಹುಡುಕಾಡಿದಾಗ ದನ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಮತ್ತೆ ಹುಡುಕಾಟ ಮುಂದುವರಿಸಿದಾಗ ತೋಟದಲ್ಲಿ ದನ ಗಾಯಗೊಂಡು ಸತ್ತು ಬಿದ್ದಿರುವುದು ಕಂಡುಬಂದಿದೆ.

ತೋಟದಲ್ಲಿ ನೀರಾವರಿ ಪೈಪ್ ಗಳಿಗೂ ಹಾನಿಯಾಗಿದ್ದು, ರಾತ್ರಿ ವೇಳೆ ಕಾಡಾನೆ ತೋಟಕ್ಕೆ ನುಗ್ಗಿ ದನದ ಮೇಲೆ ದಾಳಿ ಮಾಡಿದ್ದಲ್ಲದೆ, ದಾಂಧಲೆ ಎಸಗಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News