×
Ad

ಕಾನ | ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಆಗ್ರಹಿಸಿ ಧರಣಿ

Update: 2025-11-18 23:46 IST

ಸುರತ್ಕಲ್, ನ.18: ಇಲ್ಲಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಾನ-ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ದುರಸ್ತಿಗೆ ಆಗ್ರಹಿಸಿ, ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕಾನ ಜಂಕ್ಷನ್ ಬಳಿ ಧರಣಿ ನಡೆಯಿತು.

ರಸ್ತೆಯನ್ನು ಪೂರ್ಣಗೊಳಿಸದೆ ನಿತ್ಯ ಅಪಘಾತಕ್ಕೆ ಕಾರಣರಾಗುತ್ತಿರುವ ಪಿಡಬ್ಲ್ಯುಡಿ ಮತ್ತು ನಗರಪಾಲಿಕೆಯ ನಿರ್ಲಕ್ಷ್ಯತನವನ್ನು ಧರಣಿ ನರತರು ಖಂಡಿಸಿದರು.

ಈ ಸಂದರ್ಭ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಇಮ್ತಿಯಾಝ್, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಪವಿತ್ರ ಗುತ್ತಿಗೆ ಸಂಬಂಧದಿಂದ ಕಳಪೆ ಮತ್ತು ಅವೈಜ್ಞಾನಿಕವಾಗಿ ಸುರತ್ಕಲ್ ಎಂಆರ್‌ಪಿಎಲ್ ರಸ್ತೆಯ ನಿರ್ಮಾಣ ಮಾಡಲಾಗಿದೆ. ಹಲವೆಡೆ ಕಾಮಗಾರಿ ಅಪೂರ್ಣ ವಾಗಿದೆ. ಕಾನ -ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದ್ದರೂ ಜನಪ್ರತಿನಿದಿನಗಳು ಮೌನವಾಗಿದ್ದಾರೆ ಎಂದು ಟೀಕಿಸಿದರು.

ಮಾಜಿ ಕಾರ್ಪೊರೇಟರ್ ಆಯಾಝ್ ಕೃಷ್ಣಾಪುರ, ಶ್ರೀನಾಥ್ ಕುಲಾಲ್ ಮಾತನಾಡಿದರು.

ಈ ಸಂದರ್ಭ ಡಿವೈಎಫ್‌ಐ ಮುಖಂಡರಾದ ಬಿ.ಕೆ.ಮಕ್ಸೂದ್, ಅಜ್ಮಲ್ ಅಹ್ಮದ್, ನವಾಝ್ ಕುಳಾಯಿ, ಮುಸ್ತಫ ಬಾಳ, ಜೋಯ್ ರೋಷನ್ ಡಿಸೋಜ, ಮುನೀಬ್, ಆಟೊ ರಿಕ್ಷಾ ಚಾಲಕರ ಸಂಘದ ಮುಖಂಡ ಲಕ್ಷ್ಮೀಶ ಅಂಚನ್, ಬಶೀರ್ ಕಾನ, ಹಂಝ ಮೈಂದಗುರಿ, ರಹೀಮ್, ನಾಗರಿಕ ಹೋರಾಟ ಸಮಿತಿಯ ಮೆಹಬೂಬ್ ಖಾನ್, ಜಗದೀಶ್ ಕಾನ, ರಾಜೇಶ್ ಕಾನ, ಅಬೂಬಕರ್ ಅಂಗಡಿ, ಇಕ್ಬಾಲ್ ಜೋಕಟ್ಟೆ, ಸಿರಾಜ್ ಮೈಂದಗುರಿ, ಫ್ರಾನ್ಸಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News