ಅ.15ರಿಂದ ಮಂಗಳೂರಿನಲ್ಲಿ ಖಾದಿ ಉತ್ಸವ
ಮಂಗಳೂರು : ದ.ಕ. ಜಿಲ್ಲಾಡಳಿತ, ಜಿಪಂ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಖಾದಿ ಉತ್ಸವವು ಅ.15ರಿಂದ 24ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ನಗರದ ಲಾಲ್‌ಭಾಗ್ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಅರಳೆ ಖಾವಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು, ಖಾದಿ ಪಾಲಿವಸ್ತ್ರ, ಬಟ್ಟೆಗಳು ಹಾಗೂ ಖಾದಿಯ ವೈವಿಧ್ಯಮಯ ಉತ್ಪನ್ನಗಳು, ಯುವ ಪೀಳಿಗೆಯ ಮನ ಮೆಚ್ಚುವ ಡಿಸೈನರ್ ಉಡುಪುಗಳು, ಶರ್ಟ್‌ಗಳು, ಕುರ್ತಾಗಳು ಮತ್ತು ಆಕರ್ಷಣೆಯ ಉಡುಪುಗಳು. ಗ್ರಾಮೀಣ ಗುಡಿಗಾರರಿಂದ ತಯಾರಿಸಿದ ಮರದ ಕೆತ್ತನೆಯ ವಸ್ತುಗಳು ಮತ್ತು ಆಕಷರ್ಕ ಆಟಿಕೆಗಳು, ಆಕಷರ್ಕ ಹಾಗೂ ನೈಸರ್ಗಿಕ ಸೆಣಬಿನ ಉತ್ಪನ್ನಗಳು, ಗ್ರಾಮೀಣ ಚರ್ಮೋದ್ಯೋಗ ಉದ್ದಿಮೆಯಲ್ಲಿ ತಯಾರಾದ ಆಕಷರ್ಕ ಪಾದರಕ್ಷೆಗಳು, ಬೆಲ್ಟ್, ಗ್ರಾಮೀಣ ಕುಂಬಾರಿಕೆಯ ಕುಶಲ ವಸ್ತುಗಳು, ವ್ಯಾನಿಟಿ ಬ್ಯಾಗ್, ಪರ್ಸ್‌ಗಳು, ಹಪ್ಪಳ, ಉಪ್ಪಿನಕಾಯಿ, ಉತ್ತರ ಕರ್ನಾಟಕ ತಿಂಡಿ ತಿನಿಸುಗಳು ಲಭ್ಯವಿರುತ್ತದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.