×
Ad

ಕೊಣಾಜೆ: ವಿದ್ಯಾರ್ಥಿನಿಗೆ ಕಿರುಕುಳ ಆರೋಪ; ರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲು

Update: 2023-07-28 18:02 IST

ಕೊಣಾಜೆ: ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬ್ಲಮೊಗರು ಗ್ರಾಮದ ರಿಕ್ಷಾ ಚಾಲಕ ಇಕ್ಬಾಲ್ ಆರೋಪಿ ಎಂದು ಗುರುತಿಸಲಾಗಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೂನ್ ತಿಂಗಳಲ್ಲಿ ಬಸ್ಸು ನಿಲ್ದಾಣದಲ್ಲಿ ಬೆಳಗ್ಗೆ ಶಾಲೆಗೆ ತೆರಳಲು ನಿಂತಿದ್ದ ಸಂದರ್ಭ ಪರೀಕ್ಷೆಯಲ್ಲಿ ಪಾಸಾದದಕ್ಕೆ ಟ್ರೀಟ್ ಬೇಕು ಎಂದು ಕೇಳಿರುವುದಲ್ಲದೆ‌ ಅಶ್ಲೀಲವಾಗಿ ವರ್ತಿಸಿದ್ದ ಎಂದು ಮನೆಮಂದಿಗೆ ವಿಚಾರ ತಿಳಿಸಿದ್ದಳು ಎನ್ನಲಾಗಿದೆ.

ಮನೆಮಂದಿ ಈ ಬಗ್ಗೆ ಚಾಲಕನನ್ನ ಪ್ರಶ್ನಿಸಲು ಕುತ್ತಾರಿನ ಆಟೋ ರಿಕ್ಷಾ ಪಾರ್ಕ್ ಗೆ ತೆರಳಿದ್ದು ಆರೋಪಿ ತಲೆಮರೆಸಿಕೊಂಡಿದ್ದಾನೆ. ನಿನ್ನೆ ರಾತ್ರಿ ವಿದ್ಯಾರ್ಥಿನಿಯ ಪೋಷಕರು ಕೊಣಾಜೆ ಠಾಣೆಗೆ ತೆರಳಿ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News