×
Ad

ಕೊಣಾಜೆ: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಯುವಕನನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

Update: 2023-08-20 19:43 IST

ಕೊಣಾಜೆ: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಯುವಕನೋರ್ವ ನಾಟೆಕಲ್ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ ಆರೋಪದಲ್ಲಿ ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನನ್ನು ಸಿನಿಮೀಯ ರೀತಿಯಲ್ಲಿ ಹಿಡಿದಿರುವ ಘಟನೆ ನಡೆದಿದೆ.

ಬಂಧಿತ ಯುವಕನ್ನು ಮುಕ್ಕಚ್ಚೇರಿ, ಕೈಕೋರೋಡ್ ನಿವಾಸಿ ಸಿದ್ದೀಕ್ (24) ಎಂದು ಗುರುತಿಸಲಾಗಿದೆ. ನಿನ್ನೆ ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ದೀಕ್ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ದಾಂಧಲೆ ನಡೆಸುತ್ತಿದ್ದ ಎನ್ನಲಾಗಿದೆ.

ಈ ವೇಳೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಆತನನ್ನು ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ. ಆರೋಪಿ ಸಿದ್ದೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಅಮಲು ಪದಾರ್ಥ ಸೇವಿಸಿದ್ದು ಧೃಡಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News