×
Ad

ಕುಂಜತ್ತಬೈಲ್ ರಂಗಾಂತರಂಗ ಸ್ನೇಹ ಸಮ್ಮಿಲನ ಕಾರ್ಯಕ್ರಮ

Update: 2025-11-11 23:17 IST

ಮಂಗಳೂರು, ನ.11: ಕುಂಜತ್ತಬೈಲ್ ನ ರಂಗ ಸ್ವರೂಪ (ರಿ)ಕ್ಕೆ 2025ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಪ್ರಯುಕ್ತ ರಂಗಾಂತರಂಗ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕುಂಜತ್ತಬೈಲ್ ನ ಆಸರೆ ಮನೆಯಲ್ಲಿ ನಡೆಯಿತು.

ಖ್ಯಾತ ತಂಬೂರಿ ಗಾಯಕ ನಾದ ಮಣಿ ನಾಲ್ಕೂರು ಅವರಿಂದ ದೀಪ ಹಚ್ಚಿ ಕತ್ತಲೆಯ ಹಾಡು, ವಿನೂತನ ತತ್ವ ಭಾವ ಗಾನಯಾನ ನಡೆಯಿತು. ಈ ಸಂದರ್ಭ ರಂಗಸ್ವರೂಪದ ಮಾರ್ಗದರ್ಶಕ, ಸ್ವರೂಪ ಅಧ್ಯಯನ ಸಮೂಹ ಮಂಗಳೂರು ಇದರ ನಿರ್ದೇಶಕ ಗೋಪಾಡ್ಕರ್ ಅವರನ್ನು ಸನ್ಮಾನಿಸಲಾಯಿತು.

ರಂಗ ಸ್ವರೂಪ ತಂಡದ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ಡಾ.ವಸಂತ್ ಕುಮಾರ್ ಪೆರ್ಲ, ಕಲಾವಿದ ದಿನೇಶ್ ಹೊಳ್ಳ, ಅಂತರರಾಷ್ಟ್ರೀಯ ತರಬೇತುದಾರ ಮುಹಮ್ಮದ್ ರಫೀಕ್ ಮಾತನಾಡಿದರು.

ಸಾಹಿತಿ ಬದ್ರುದ್ದೀನ್ ಕೂಳೂರು, ಸುಮನಾ ರೆಬೆಲ್ಲೊ, ಸ್ತ್ರೀ ಜಾಗೃತಿ ಸಮಿತಿ ಮಂಗಳೂರು ಸಂಚಾಲಕಿ ಸಂಶಾದ್ ಕುಂಜತ್ತಬೈಲ್, ಅರವಿಂದ ಕುಡ್ಲ, ಆದಂ ಖಾನ್, ರಂಗ ಸ್ವರೂಪ ತಂಡದ ಪ್ರಮುಖರಾದ ಹುಸೈನ್ ರಿಯಾಝ್, ಜ್ಯೋತಿ ಸುಬ್ರಹ್ಮಣ್ಯ, ತಸ್ಲೀಮಾ ಬಾನು, ಹನೀಷಾ, ರೈಹಾನ್, ವೈಷ್ಣವಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ಸ್ವಾಗತಿಸಿದರು. ಕಲಾವಿದ ಝುಬೇರ್ ಖಾನ್ ಕುಡ್ಲ ವಂದಿಸಿದರು, ಶಿಕ್ಷಕ ಪ್ರೇಮನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News