ಮಂಗಳೂರು | ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
Update: 2025-11-23 19:54 IST
ಮಂಗಳೂರು, ನ.23: ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯು ರೇಷ್ಮಾ ಮೆಮೊರಿಯಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.
ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ಬಬಿತ ಸೂರಜ್ ಅವರು ಶಕ್ತಿ ಶಾಲೆಯ ಮುದ್ದು ಪುಟಾಣಿಗಳೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಬೆಳೆಯುವುದಕ್ಕೆ ಮೌಲ್ಯಗಳ ಬೇರುಗಳು ಮತ್ತು ಆಸಕ್ತಿಯ ರೆಕ್ಕೆಗಳು ಇರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬ ಮಾತಿನಂತೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಾ ಜೀವನದಲ್ಲಿ ಸದೃಢರಾಗಿ ಬೆಳೆಯಬೇಕು ಎಂದರು.
ಶಿಕ್ಷಕಿ ವಿದ್ಯಾ ಲಕ್ಷ್ಮೀ ಸ್ವಾಗತಿಸಿದರು, ಶಿಕ್ಷಕಿ ಮರಿಯಾ ವಂದಿಸಿದರು. ಶಿಕ್ಷಕಿ ನಯನ ಅವರು ದಿನದ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.