ಮಂಗಳೂರು: ಸಿಟಿ ಮಾರ್ಟ್ ಕಾರ್ಡ್ಸ್ ಆ್ಯಂಡ್ ಗ್ರಾಫಿಕ್ಸ್‌ನ ನವೀಕೃತ ಕಚೇರಿ ಉದ್ಘಾಟನೆ
ಮಂಗಳೂರು, ಆ.28: ನಗರದ ಕಂಕನಾಡಿಯ ಮಂಗಳೂರು ಗೇಟ್ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿರುವ ಸಿಟಿ ಮಾರ್ಟ್ ಕಾರ್ಡ್ಸ್ ಆ್ಯಂಡ್ ಗ್ರಾಫಿಕ್ಸ್‌ನ ನವೀಕೃತ ಕಚೇರಿಯ ಉದ್ಘಾಟನಾ ಕಾರ್ಯಕ್ರಮವು ಗುರುವಾರ ನಡೆಯಿತು.
ಹುಸೈನ್ ಮುಸ್ಲಿಯಾರ್ ಕೆ.ಸಿ.ರೋಡ್ ರಿಬ್ಬನ್ ಕತ್ತರಿಸಿ ಕಚೇರಿಯನ್ನು ಉದ್ಘಾಟಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತ ಅಧಿಕಾರಿ ಫಾ. ಡಾ. ಮೈಕಲ್ ಸಾಂತುಮಾಯರ್ ಗ್ರಾಫಿಕ್ಸ್ ಡಿಸೈನ್ ವಿಭಾಗವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಿಟಿ ಮಾರ್ಟ್ ಕಾರ್ಡ್ಸ್ ಆ್ಯಂಡ್ ಗ್ರಾಫಿಕ್ಸ್‌ನ ಮಾಲಕ ಮುಹಮ್ಮದ್ ಸಹೀರ್ ಮಾತನಾಡಿ ಕಳೆದ ಹನ್ನೊಂದು ವರ್ಷಗಳಿಂದ ನಗರದಲ್ಲಿ ಸಿಟಿ ಮಾರ್ಟ್ ಕಾರ್ಡ್ಸ್ ಆ್ಯಂಡ್ ಗ್ರಾಫಿಕ್ಸ್ ಕಾರ್ಯಾಚರಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ಡಿಸೈನ್‌ಗಳನ್ನು ಒದಗಿಸುತ್ತಿದೆ. ಅಲ್ಲದೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಗ್ರಾಫಿಕ್ಸ್ ಡಿಸೈನ್ ಮಾಡಿ ಕೊಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಆ್ಯಂಟಿಕ್ ಜ್ಯುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಆಸಿಫ್ ಮಾಲಿಗ, ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಅಬ್ದುಲ್ ರವೂಫ್, ಅಬ್ದುಲ್ ರಹೀಮ್, ರಾಮ್ಸ್ ಇದರ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಶೆಟ್ಟಿ, ವಿ.ಜೆ. ಅಸೋಸಿಯೇಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ವಿನಿತ್ ಆಸ್ಕರ್ ಡಿಕೋಸ್ತ ಸನ್ ಬೀಮ್ ಅಸೋಸಿಯೇಟ್ಸ್‌ನ ಅಬ್ದುಲ್ ಬಾಸಿತ್, ಕಾಂಕ್ವೆಸ್ಟ್ ಸೊಲೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಖಾದರ್, ಹಫೀಝ್ ಪಿ.ಬಿ, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ನ್ಯಾಯವಾದಿ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.