×
Ad

ಮಂಗಳೂರು: ಹಿದಾಯ ಫೌಂಡೇಶನ್ ವತಿಯಿಂದ‌ ಡೋನರ್ಸ್ ಮೀಟ್ ಕಾರ್ಯಕ್ರಮ

Update: 2025-07-25 23:47 IST

ಮಂಗಳೂರು: ಹಿದಾಯ ಫೌಂಡೇಶನ್ ಮಂಗಳೂರು ಇದರ 15ನೇ ಜಾಗತಿಕ ಸಮಾವೇಶ ಮತ್ತು ಡೋನರ್ಸ್ ಮೀಟ್ ಕಾರ್ಯಕ್ರಮ ನಗರದ ಎಪಿ ಸೆಂಟರ್ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮೌಲಾನಾ ಶುಹೈಬ್ ಎಚ್. ನದ್ವಿ ದಿಕ್ಸೂಚಿ ಮಾತುಗಳನ್ನಾಡಿದರು. ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ಸಚಿತ್ರ ವರದಿಗಳ ಸಂಚಿಕೆಯನ್ನು ಹಿದಾಯ ಫೌಂಡೇಶನ್ ಟ್ರಸ್ಟ್ ನ ಚೇರ್ಮ್ಯಾನ್ ಹಾಜಿ ಝಕರಿಯಾ ಜೋಕಟ್ಟೆ ಬಿಡುಗಡೆಗೊಳಿಸಿದರು. ಬಳಿಕ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಬ್ದುಲ್ ರಝಾಕ್ ಮಂಡಿಸಿದರು. ಟ್ರಸ್ಟಿ ಸಲೀಮ್ ಯು.ಬಿ. ವೆಲ್‌ನೆಸ್ ಹೆಲ್ತ್ ಕೇರ್ ಸೇವಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು.

ಸಂಸ್ಥೆಯ ವಾರ್ಷಿಕ ಲೆಕ್ಕ ಪತ್ರ ಮತ್ತು ಮುಂದಿನ ಸಾಲಿನ ಆಯವ್ಯಯವನ್ನು ಟ್ರಸ್ಟ್ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಮತ್ತು ಆಡಳಿತಾಧಿಕಾರಿ ಆಬಿದ್ ಅಸ್ಗರ್ ಮಂಡಿಸಿ ಅನುಮೋದನೆ ಪಡೆದುಕೊಂಡರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಖಾಸಿಂ ಅಹ್ಮದ್ ಅವರು ಉದ್ದೇಶಿತ ಎಪಿ ಸೆಂಟರ್ ನ ಕಾರ್ಯವಿಧಾನಗಳ ಬಗ್ಗೆ ಪಿಪಿಟಿ ಮೂಲಕ ಪ್ರಸ್ತಾವನೆ ಮಾಡಿದರು.

ಅಪರಾಹ್ನ ನಡೆದ ದಾನಿಗಳ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿದ್ದ ಝಕಾರಿಯಾ ಜೋಕಟ್ಟೆ ಅವರು, ಸಮುದಾಯ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸುವ ಮೂಲಕ ಸರ್ವರಿಗೂ ಸಮಬಾಳನ್ನು ಒದಗಿಸುವುದು ಹಿದಾಯ ಫೌಂಡೇಶನ್ ನ ಗುರಿ ಎಂದು ಹೇಳಿದರು. ಈ‌ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಸಂಸ್ಥೆಯು ಮಾಡುತ್ತಿರುವ ಸೇವಾ ಚಟುವಟಿಕೆಗಳ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಯೆನೆಪೋಯ ಸಂಸ್ಥೆಯ ಫರಾದ್ ಯೆನೆಪೋಯ , ಉಧ್ಯಮಿ ಶೇಕ್ ಕರ್ನಿರೆ, ಡಾ. ಹಬೀಬುರ್ ರಹ್ಮಾನ್, ಎಂಜಿನಿಯರ್ ಪ್ರಮುಖ್ ರೈ, ಅನಿವಾಸಿ ಉದ್ಯಮಿ‌ ರೊನಾಲ್ಡ್ ಮಾರ್ಟೀಸ್ ದುಬೈ, ಹನೀಫ್ ಹುದವಿ ಪುತ್ತೂರು, ಜೆ.ಬಿ ಅಬ್ದುಲ್ ರಕ್ವಾನಿ ಅಲ್ ಖೋಬರ್, ಅಬ್ದುಲ್ ಸಲೀಮ್ ಟೆಸ್ಕಾನ್ ಗ್ಲೋಬಲ್, ಯೂನುಸ್ ಹಸನ್ ಜುಬೈಲ್, ಹಿರಿಯ ಪತ್ರಕರ್ತ ಅಬ್ದುಲ್ ಸಲಾಂ ಪುತ್ತಿಗೆ,‌ ಫಾರೂಕ್ ಪೋರ್ಟ್ ವೇ, ಮೊಹಮ್ಮದ್ ಆರೀಫ್ ಪಡುಬಿದ್ರೆ, ಅಬ್ದುಲ್ ರಝಾಕ್ ಜಿ. ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉಪಾಧ್ಯಕ್ಷ ರಿಯಾಝ್ ಬಾವ, ಕೋಶಾಧಿಕಾರಿ ಬಿ.ಎಂ‌ ಶರೀಫ್ ಬೋಳಾರ್ ವೈಟ್‌ಸ್ಟೋನ್, ಟ್ರಸ್ಟಿಗಳಾದ ಝಿಯಾವುದ್ದೀನ್ ಅಹ್ಮದ್, ಅಸಿಫ್ ಹೊಮ್‌ಪ್ಲಸ್, ಮಕ್ಬೂಲ್ ಅಹ್ಮದ್, ಬಶೀರ್ ಎಫ್‌.ಎಂ, ಅಬ್ದುಲ್ಲಾ ಮೋನು, ಇಲ್ಯಾಸ್ ಹುಸೈನ್, ಅಹ್ಮದ್ ಬಾವ, ಶಂಸೀರ್ ಬಾರಿ, ಅನ್ವರ್ ಸಾದಾತ್, ಹಮೀದ್ ಮಠ, ಮೊಹಮ್ಮದ್ ಅಲಿ, ಅಸ್ಕಾಫ್ ಅಹಮದ್, ಮತೀನ್ , ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ಘಟಕದ ಸದಸ್ಯರು, ಕೇಂದ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ವಿವಿಧ ಯೋಜನಾ ಉಸ್ತುವಾರಿಗಳು ಮತ್ತು ಅನಿವಾಸಿ ಘಟಕಗಳ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು. ಸದಸ್ಯ ಆಶಿಕ್ ಕುಕ್ಕಾಜೆ ಖಿರಾಅತ್ ಪಠಿಸಿದರು. ಅಬ್ಬಾಸ್ ಉಚ್ಚಿಲ್ ವಂದಿಸಿದರು. ಬಿ. ಮೊಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News