ಮಂಗಳೂರು | ರಿಫಾಯಿ ಇರ್ಷಾದ್ ಅಸೋಸಿಯೇಶನ್‌ಗೆ ಪದಾಧಿಕಾರಿಗಳ ಆಯ್ಕೆ
Update: 2025-08-31 15:39 IST
ಎ.ಕೆ.ಅಬ್ದುಲ್ ಜಬ್ಬಾರ್
ಮಂಗಳೂರು, ಆ.31: ಅಡ್ಡೂರು ಕೆಳಗಿನಕೆರೆಯ ರಿಫಾಯಿ ಮಸೀದಿಯಲ್ಲಿ ನಡೆದ ಅಡ್ಡೂರು ರಿಫಾಯಿ ಇರ್ಷಾದ್ ಸುಬ್ಬಾನ್ ಅಸೋಸಿಯೇಶನ್ (ರಿ) ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಸೋಸಿಯೇಶನ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಎ.ಕೆ.ಅಬ್ದುಲ್ ಜಬ್ಬಾರ್, ಉಪಾಧ್ಯಕ್ಷರಾಗಿ ಬಶೀರ್, ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್, ಜೊತೆ ಕಾರ್ಯದರ್ಶಿಯಾಗಿ ಸುಹೈಬ್, ಕೋಶಾಧಿಕಾರಿಯಾಗಿ ಯಾಕೀಬ್ ಎ.ಕೆ., ಲೆಕ್ಕಪರಿಶೋಧಕರಾಗಿ ಅಸ್ಪಾಕ್, ಗೌರವಾಧ್ಯಕ್ಷರಾಗಿ ಅಹಮ್ಮದಾಕ, ಸಲಹೆಗಾರರಾಗಿ ಅಬೂಬಕ್ಕರ್(ಪುತ್ತಾಕ), ಸಿದ್ದಿಕ್ (ಕಂಪಿನಿ), ಹೈದರ್, ಹಮೀದ್ ಆಯ್ಕೆಯಾಗಿದ್ದಾರೆ.