ಮಂಗಳೂರು: ಸೆ.1ರಂದು ಹುಬ್ಬುರ್ರಸೂಲ್ ಕಾನ್ಫರೆನ್ಸ್, ಇಲಲ್ ಹಬೀಬ್ ಮೀಲಾದ್ ರ‍್ಯಾಲಿ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ ಅ) ಅವರ 1500ನೇ ಜನ್ಮ ದಿನಾಚರಣೆ ಪ್ರಯುಕ್ತ ಸೆ.1ರಂದು ಇಲಲ್ ಹಬೀಬ್ ಮೀಲಾದ್ ರ‍್ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 2.30ಕ್ಕೆ ಇಲಲ್ ಹಬೀಬ್ ಮೀಲಾದ್ ರ‍್ಯಾಲಿ ಪ್ರಾಪಂಭವಾಗಲಿದ್ದು ಬಾವುಟಗುಡ್ಡೆಯಿಂದ ಪುರಭವನ ತನಕ ನಡೆಯಲಿದೆ. ಸಂಜೆ 4.30ಕ್ಕೆ 1500 ಮಂದಿಯನ್ನು ಸೇರಿಸಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯಲಿದ್ದು ಪ್ರಸಿದ್ಧ ಸೂಫೀ ಹಾಡುಗಾರರು ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದ್ದು, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಲಿದ್ದಾರೆ.
ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಡಾ. ಶೇಖ್ ಬಾವ ಹಾಜಿ ಅಧ್ಯಕ್ಷತೆ ವಹಿಸಲಿರುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಹಲವಾರು ಸಾದಾತುಗಳು, ಉಲಮಾಗಳು ಹಾಗೂ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.