ಮಂಗಳೂರು | ನ.19-25: ಇಂಟಾಕ್‌ನಿಂದ ಕಲಾ ಪ್ರದರ್ಶನ
ಮಂಗಳೂರು, ನ.18: ಭಾರತೀಯ ಕಲೆ ಮತ್ತು ಪರಂಪರೆ ಸಂಸ್ಥೆಯಾದ ಇಂಟಾಕ್ ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ನ.19ರಿಂದ 25ರವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಆಚರಿಸಲಿದೆ.
ವಿಶ್ವ ಪರಂಪರೆಯ ಸಪ್ತಾಹವು ನ.19ರ ಬುಧವಾರ ಸಂಜೆ 5:30ಕ್ಕೆ ಲೇಖಕ ಡಾ. ಗಣೇಶ್ ಅಮೀನ್ ಸಂಕಮಾರ್ ಅವರ ಱತುಳು ಭಾಷೆ ಬೊಕ್ಕ ಬದುಕು ವಿಷಯದ ಕುರಿತು ಉಪನ್ಯಾಸದೊಂದಿಗೆ ಆರಂಭವಾಗಲಿದೆ.
ನ.20ರಂದು ಸಂಜೆ 5:30ಕ್ಕೆ ನಾಣ್ಯ ಸಂಗ್ರಾಹಕ ಎಂ. ಪ್ರಶಾಂತ್ ಶೆಟ್ ಇತಿಹಾಸದ ಗುರುತು: ಪಶ್ಚಿಮ ಗಂಗ ರಾಜವಂಶದ ನಾಣ್ಯಗಳು ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ನ.21ರ ಸಂಜೆ 5:30ಕ್ಕೆ ಯಕ್ಷಗಾನ ಕಲಾವಿದೆ ಶ್ರುತಿ ಬಂಗೇರ ಯಕ್ಷಗಾನದಲ್ಲಿ ಸ್ತ್ರೀವೇಷ: ಭಾರತೀಯ ನೃತ್ಯನಾಟಕಗಳಲ್ಲಿ ಸ್ತ್ರೀ ವೇಷಧಾರೆಯ ಸಂಪ್ರದಾಯೞ ಕುರಿತು ಮಾತನಾಡಲಿದ್ದಾರೆ.
ನ.22ರ ಸಂಜೆ 5:30ಕ್ಕೆ ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಮ್ಮುಖ ನಮ್ಮ ಊರು ನಮ್ಮ ನೆಲ ಕಲಾ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಹರೀಶ್ ಕೊಡಿಯಾಲ್ಬೈಲ್, ಜನಾರ್ದನ ಹಾವಂಜೆ, ಜೀವನ್ ಸಾಲಿಯಾನ್, ರೇಷ್ಮಾ ಎಸ್. ಶೆಟ್ಟಿ, ಸಂತೋಷ್ ಅಂದ್ರಾದೆ, ಸಂತೋಷ್ ಪೈ, ಶಿಲ್ಪಾಭಟ್, ಉಮೇಶ್ ಎಂ., ವಿಶ್ವಾಸ್ ಎಂ., ವಿಲ್ಸನ್ ಸೋಜ ಸಹಿತ ಕಲಾವಿದರ ಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.