×
Ad

ಮಂಗಳೂರು | ಮೊಂತಿ ಹಬ್ಬದ ನವದಿನಗಳ ನೊವೆನಾಗಳಿಗೆ ಚಾಲನೆ

Update: 2025-08-31 15:35 IST

ಮಂಗಳೂರು, ಆ.31: ಕನ್ಯಾ ಮರಿಯಮ್ಮ ಹಬ್ಬ (ಮೊಂತಿಹಬ್ಬ)ದ ಅಂಗವಾಗಿ ನವದಿನಗಳ ಪ್ರಾರ್ಥನಾ ವಿಧಿಗಳಿಗೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಎಲ್ಲ ಚರ್ಚ್‌ಗಳಲ್ಲಿ ಶನಿವಾರ ಚಾಲನೆ ನೀಡಲಾಯಿತು.

ನವ ದಿನಗಳ ಪ್ರಾರ್ಥನಾ ವಿಧಿ ಮುಗಿದ ಬಳಿಕ ಸೆ.8ರಂದು ಮೊಂತಿ ಹಬ್ಬ (ಕುರಲ್ ಪರ್ಬ)ವನ್ನು ಕ್ರೈಸ್ತ ಸಮುದಾಯದವರು ಆಚರಣೆ ಮಾಡಲಿದ್ದಾರೆ. ಈ ನೊವೆನಾ ಚಾಲನೆಯ ಸಂದರ್ಭದಲ್ಲಿ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪ ಅರ್ಪಣೆ ಮಾಡುವ ಮೂಲಕ ಪ್ರಕೃತಿಯ ಆರಾಧನೆಗೆ ಸಾಕ್ಷಿಯಾದರು.

ನಗರದ ಉರ್ವ ಚರ್ಚಿನಲ್ಲಿ ಜಪಮಾಲೆಯ ಬಳಿಕ ನಡೆದ ಕೃತಜ್ಞತಾ ಪೂಜೆಯಲ್ಲಿ ಚರ್ಚಿನ ಧರ್ಮಗುರು ಫಾ.ಮೈಕಲ್ ಲೋಬೋ ಪ್ರವಚನ ನೀಡಿದರು.

ಫಾ.ಮೌರಿಸ್ ಕೃತಜ್ಞತಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಉರ್ವ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ನೊವೆನಾ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಕನ್ಯಾ ಮರಿಯಮ್ಮಳಿಗೆ ಪುಷ್ಪ ಅರ್ಪಣೆ ಮಾಡಿದ ಮಕ್ಕಳಿಗೆ ಹಾಗೂ ಹಿರಿಯರಿಗೆ ಸಿಹಿತಿಂಡಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News