×
Ad

ಮಂಗಳೂರು: ವ್ಯಕ್ತಿತ್ವ ವಿಕಸನ, ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Update: 2025-08-03 22:23 IST

ಮಂಗಳೂರು, ಆ.3: ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಇಂಜಿನಿಯರಿಂಗ್, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ ‘ಪರಿಣತಿ-2025’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭ ರವಿವಾರ ಜರುಗಿತು.

ಶಿಬಿರದ ನಾಲ್ಕನೇ ದಿನದಲ್ಲಿ ಬೆಳಗ್ಗೆ ಶಿಬಿರಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿತು. ಹಾಗೂ ‘‘ಸ್ಪಾರ್ಕ್ ಟು ಸ್ಟಾರ್ಟ ಅಪ್’ ಸೆಮಿನಾರ್‌ನ ಸಂಪನ್ಮೂಲ ವ್ಯಕ್ತಿಯಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದ ಗೋಪಾಲ ಶೆಣೈ, ಇವರು ತಮ್ಮ ಉದ್ಯಮಿ ಜೀವನದ ಯಶಸ್ಸನ್ನು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮತ್ತು ಇಂದಿನ ಕೆಲಸ ಇಂದೇ ಮಾಡಿ ಮುಗಿಸುವ ಛಲ, ಸೋಲೆ ಗೆಲುವಿನ ಮೂಲ, ಸೋಲನ್ನು ಸ್ವೀಕರಿಸಿ ಮುಂದೆ ಅವಿರತ ಪರಿಶ್ರಮದ ಮೂಲಕ ಜಯ ಸಾಧಿಸಬೇಕು ಎಂದರು.

ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ನೀಡಿ ಗೌರವಿಸಲಾ ಯಿತು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಡಾ.ವಿಜಯಲಕ್ಷ್ಮೀ ನಾಯಕ್ ಅವರು ನಾಲ್ಕು ದಿನಗಳ ಈ ಕಾರ್ಯಗಾರದ ಉಸ್ತುವಾರಿಯನ್ನು ವಹಿಸಿದ್ದರು. ವಿಶ್ವ ಕೊಂಕಣಿ ಕೇಂದ್ರದ ಲಕ್ಷ್ಮೀ ಕಿಣಿ, ವಿಘ್ನೇಶ್ ಸಹಕರಿಸಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ ದೇವದಾಸ್ ಪೈ, ಪೂರ್ಣಾನಂದ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಪ್ರಭು ವಗ್ಗ, ದಯಾನಂದ ನಾಯಕ್ ಪೂಂಜಾಲ್‌ಕಟ್ಟೆ, ನಿಕಟ ಪೂರ್ವ ಅಧ್ಯಕ್ಷರಾದ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ಅನಂತ್ ಪ್ರಭು ಮರೋಳಿ, ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಕಿನ್ನಾಜೆ, ಮೋಹನ್ ನಾಯಕ್ ಒಡ್ಡೂರು, ಅರವಿಂದ ಪ್ರಭು ಕುಲಶೇಖರ, ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ ಆರ್ ಭಟ್ ,ವಿಶ್ವ ಕೊಂಕಣಿ ಕೇಂದ್ರ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ ಪೈ , ಸುಚಿತ್ರಾ ರಮೇಶ ನಾಯಕ್, ಉಪೇಂದ್ರ ನಾಯಕ್ ಮೇರಿಹಿಲ್, ಸುಧಾಕರ ನಾಯಕ್ ಅಸೈಗೋಳಿ, ದಯಾನಂದ ನಾಯಕ್ ಮೈರ, ಗಣೇಶ್ ನಾಯಕ್ ಬೋಳಂಗಡಿ, ರಾಜೇಶ್ ನಾಯಕ್ ಬೋಳಂಗಡಿ, ಭಾಸ್ಕರ ಪ್ರಭು ಗೋಳಿಮಾರು, ರತ್ನಾವತಿ ಪ್ರಭು ಕುಲಶೇಖರ, ಗಣಪತಿ ಶೆಣೈ ಡೆಚ್ಚಾರು, ಪ್ರಭಾಕರ ಪ್ರಭು ಗೋಳಿಮಾರು, ಸುನಂದಾ ನಾಯಕ್, ದಿನಕರ ಶೆಣೈ ಮರೋಳಿ, ಗೋಪಾಲ ಸಾಮಂತ್ ಮೈರಾ, ನಿತ್ಯಾನಂದ ಭಟ್, ಭಾಸ್ಕರ ಪ್ರಭು ಕೋರ್ದೊಟ್ಟು, ವಿಶ್ವನಾಥ ಶೆಣೈ ಮರೋಳಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಪ್ರಶಾಂತ್ ನಾಯಕ್ ಸಿದ್ದಕಟ್ಟೆ, ಮಧುಸೂಧನ್ ಪ್ರಭು ಬಜ ಪ್ಪಾಲ್, ಸ್ವಾತಿ ನಾಯಕ್ ಒಡ್ಡೂರು,ಮೇಘಾ ಶೆಣೈ ಡೆಚ್ಚಾರು, ಪೂಜಾ ಪ್ರಭು ಮಣಿಯ, ಮುಂತಾದವರು ಶಿಬಿರದ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ.ರಮೇಶ ನಾಯಕ್ ಮೈರಾ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ರಚನಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಚೇತನ ಶೆಣೈ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News