×
Ad

ಮಂಗಳೂರು | ಖಾಸಗಿ ವಿವಿ ಕುಲಪತಿಯ ವಾಟ್ಸ್ ಆ್ಯಪ್ ಹ್ಯಾಕ್: ಹಣಕ್ಕಾಗಿ ಸಂದೇಶ ರವಾನೆ!

Update: 2025-07-23 09:57 IST

ಸಾಂದರ್ಭಿಕ ಚಿತ್ರ (source: MetaAI)

ಮಂಗಳೂರು: ನಗರದ ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಕುಲಪತಿಯೊಬ್ಬರಿಗೆ ಸೇರಿರುವ ವಾಟ್ಸ್ ಆ್ಯಪ್ ಅಕೌಂಟ್ ಅನ್ನು ಹ್ಯಾಕ್ ಮಾಡಲಾಗಿದ್ದು, ಅವರ ಸಂಪರ್ಕದಲ್ಲಿದ್ದವರ ಮೊಬೈಲ್ ನಂಬರ್ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಕುಲಪತಿಯ ಮೊಬೈಲ್ ಫೋನ್ ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಕೊರಿಯರ್ ಕಂಪೆನಿಯಿಂದ ಎಂದು ಪರಿಚಯಿಸಿಕೊಂಡಿದ್ದ. ಆತ ಬಳಿಕ ಕುಲಪತಿಯ ವಾಟ್ಸ್ ಆ್ಯಪ್ ಗೆ ಲಿಂಕ್ ವೊಂದನ್ನು ಕಳುಹಿಸಿದ್ದ. ಅವರು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರ ಸಂಪರ್ಕದಲ್ಲಿದ್ದ ಇತರರ ಮೊಬೈಲ್ ನಂಬರ್ ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ಇದನ್ನು ಅರಿತ ಅವರು ತಕ್ಷಣ ವಾಟ್ಸ್ ಆ್ಯಪ್ ಅಕೌಂಟ್ ಆಗಿರುವ ಬಗ್ಗೆ ಎಲ್ಲರಿಗೂ ಮಾಹಿತಿ ರವಾನಿಸಿದ್ದಾರೆ. ಬಳಿಕ ಈ ಬಗ್ಗೆ ಸೆನ್ ಠಾಣೆಗೆ ದೂರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News