ಮಂಗಳೂರು | ಡಿ.7ರಂದು ಶಾರದಾ ವಿದ್ಯಾಲಯದಲ್ಲಿ ‘ಹೊನಲು ಬೆಳಕಿನ ಕ್ರೀಡೋತ್ಸವ’
Update: 2025-12-04 18:49 IST
ಸಾಂದರ್ಭಿಕ ಚಿತ್ರ PC | GROK
ಮಂಗಳೂರು, ಡಿ. 4: ಶಾರದಾ ವಿದ್ಯಾಲಯದ ‘ಭೂವರಾಹ ಬಯಲು ಸಭಾಂಗಣದಲ್ಲಿ ‘ಹೊನಲು ಬೆಳಕಿನ ಕ್ರೀಡೋತ್ಸವ’ ಡಿ.7ರಂದು ನಡೆಯಲಿದೆ.
ಮಕ್ಕಳಲ್ಲಿ ಶಿಸ್ತು, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಸಾಹಸ ಕ್ರೀಡೆ, ನೃತ್ಯ, ಸಂಗೀತ ಒಳಗೊಂಡ ‘ಹೊನಲು ಬೆಳಕಿನ ಕ್ರೀಡೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಸುಮಾರು 2,000 ಮಂದಿ ವಿದ್ಯಾರ್ಥಿಗಳು ಹೊನಲು ಬೆಳಕಿನಲ್ಲಿ ವಿವಿಧ ಸಾಹಸ, ಸಾಂಸ್ಕೃತಿಕ, ಮನೋರಂಜನಾ ಕಲಾ ಪ್ರಕಾರಗಳೊಂದಿಗೆ ಭಾಗವಹಿಸಿ ತಮ್ಮ ಕಲೆ, ವಿವಿಧ ವಿನ್ಯಾಸಗಳ ರಚನೆ, ಸಾಹಸ ಪ್ರದರ್ಶನ ನೀಡುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಆಮೋಘ ಪ್ರತಿಕ್ರಿಯೆ ದೊರಕುತ್ತಿದೆ.
ಈ ಬಾರಿಯ ಕ್ರೀಡೋತ್ಸವ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯಾರ್ ಆಗಮಿಸಲಿದ್ದಾರೆ. ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ತಿಳಿಸಿದ್ದಾರೆ.