ಮಂಗಳೂರು | ಡಿ.15ರಂದು ʼಎಚ್ಆರ್‌ಎಂಎಸ್-2.0ʼ ಕಾರ್ಯಾಗಾರ
Update: 2025-12-12 19:09 IST
ಮಂಗಳೂರು,ಡಿ.12:ಸರಕಾರಿ ಕಚೇರಿಗಳಲ್ಲಿ ʼಎಚ್ಆರ್‌ಎಂಎಸ್-2.0ʼ ತಂತ್ರಾಂಶಗಳ ನಿರ್ವಹಣೆ ಮತ್ತು ಬಳಕೆ ಕುರಿತ ಕಾರ್ಯಾಗಾರವು ಡಿ.15ರಂದು ಬೆಳಗ್ಗೆ 10:30ರಿಂದ ನಗರದ ಕ್ಲಾಕ್ ಟವರ್ ಹತ್ತಿರ ಇರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಂದಿನಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಜನಾಧಿಕಾರಿ ಸುಧಾಮಣಿ ಮತ್ತು ತಾಂತ್ರಿಕ ತರಬೇತುಗಾರ ಸುಮಂತ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.