ಮಂಜನಾಡಿ ಉರೂಸ್ ಧ್ವಜಾರೋಹಣ
ಮಂಜನಾಡಿ: ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾ ಅಲ್ ಬುಖಾರಿ ಅವರ ಹೆಸರಿನಲ್ಲಿ ಡಿ.17 ರಿಂದ ಡಿ.27 ರ ವರೆಗೆ ಮಸೀದಿ ವಠಾರದಲ್ಲಿ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಮಸೀದಿಯ ಗೌರವ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಸೀದಿಯ ಕಾರ್ಯಕ್ರಮ ನಾವು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬೇಕು. ಅಭಿವೃದ್ದಿ ನಮ್ಮ ಗುರಿಯಾಗಿರುತ್ತದೆ. ಉರೂಸ್ ಕಾರ್ಯಕ್ರಮ ಯಶಸ್ಸು ಆಗಿ ನಡೆಯಲಿ ಎಂದು ಹಾರೈಸಿದರು.
ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಆಲಿಕುಂಞಿ ಪಾರೆ, ಮೊಯ್ದಿನ್ ಕುಟ್ಟಿ, ಮುನೀರ್ ಬಾವ, ಕೋಶಾಧಿಕಾರಿ ಉಮರ್ ಕುಂಞಿ ಮೋರ್ಲ, ಕಾರ್ಯದರ್ಶಿ ಗಳಾದ ಹಮೀದ್ ಆರಂಗಡಿ, ಬಾಪಕುಂಞಿ, ಕುಂಞಿ ಬಾವ ಕಟ್ಟೆಮಾರ್, ನವಾಝ್ ನರಿಂಗಾನ, ಇಬ್ರಾಹಿಂ ಅಹ್ಸನಿ,ಎ.ಎಂ.ಇಬ್ರಾಹೀಂ, ಟಿ.ಮುಹಮ್ಮದ್, ಅಬ್ದುಲ್ ರಹ್ಮಾನ್ ರಝ್ವಿ ಮತ್ತಿತರರು ಉಪಸ್ಥಿತರಿದ್ದರು.