×
Ad

ಯಾವುದೇ ಪ್ರಕರಣಗಳ ಆರೋಪಿಗಳಿಗೆ ಆಶ್ರಯ ನೀಡಿದರೆ ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ

Update: 2025-05-31 21:06 IST

 ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಯಾವುದೇ ಪ್ರಕರಣಗಳ ಆರೋಪಿಗಳಿಗೆ ಯಾರೇ ಆದರೂ ಆಶ್ರಯ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಅಪರಾಧ ಪ್ರಕರಣ ಮಾಡಿದ ಬಳಿಕ ಆರೋಪಿಗಳಿಗೆ ಆಶ್ರಯ ನೀಡುವುದು, ಆರ್ಥಿಕ ಸಹಾಯ ಮಾಡುವುದು, ಆಹಾರ, ಫೋನ್, ವಾಹನ ಇತ್ಯಾದಿ ರೂಪದಲ್ಲಿ ನೀಡಿದರೆ ಅವರನ್ನೂ ಕೂಡ ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕೆಲವೊಂದು ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪ್ರಕರಣದ ತನಿಖೆ ನಡೆಸಿದಾಗ ಕೃತ್ಯಕ್ಕೆ, ಆರೋಪಕ್ಕೆ ಸಹಕಾರ ನೀಡಿದ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾದರೂ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News