×
Ad

ಮಂಗಳೂರು: ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆ

Update: 2025-08-06 21:08 IST

ಮಂಗಳೂರು : ಪವಿತ್ರ ಆತ್ಮರ ದೇವಾಲಯ ಇದರ ಸ್ಪೋಟ್ಸ್ ಕ್ಲಬ್ ವತಿಯಿಂದ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆ ಆ.3ರಂದು ನಡೆಯಿತು. ಕಾರ‌್ಯಕ್ರಮವನ್ನು ಪವಿತ್ರ ಆತ್ಮರ ದೇವಾಲಯ ಧರ್ಮ ಗುರುಗಳಾದ ಫಾ. ಲಿಯೋ ಲೋಬೊ ಉದ್ಘಾಟಿಸಿದರು.

ಯುವ ಪೀಳಿಗೆಗೆ ಕೃಷಿಯ ಅಗತ್ಯತೆ ಹಾಗೂ ಹಿಂದೆ ಕೃಷಿಯಿಂದ ಜನರು ಜೀವನ ನಡೆಸಿ ಪ್ರಕೃತಿಯಿಂದ ಒಲವು ತೋರಿಸಿದ್ದ ಬಗ್ಗೆ ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ನಿಕಟ ಪೂರ್ವ ಕಾರ್ಪೊರೇಟರ್ ಪ್ರವೀಣ್ ಚಂದ್ರ ಅಳ್ಚ ಜನತಾ ವ್ಯಾಯಮ ಶಾಲೆಯ ಅಧ್ಯಕ್ಷದೀಪಕ್ ಬಜಾಲ್, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆಡಳಿತ ಸದಸ್ಯ ಶಶಿಧರ ಕೊಟ್ಟಾರಿ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಮೌರಿಸ್ ಡಿಸೋಜ, ಕಾರ್ಯಧ್ಯಕ್ಷೆ ಲಿಡ್ವಿನ್‌ಲೋಬೊ, ಆಯೋಗ ಗಳ ಸಂಚಾಲಕ ಲಿಸ್ಟನ್ ಡಿಸೋಜ, ಆಟೋಟ ಸ್ಪರ್ಧೆ ನಡೆಸಲು ಸ್ಥಳಾವಕಾಶ ನೀಡಿದ ಗದ್ದೆಯ ಮಾಲಿಕರಾದ ಕೇಶವ ಭಂಡಾರಿ, ಜನತಾ ವ್ಯಾಯಮ ಶಾಲೆಯ ಹಿರಿಯ ಗುರುಗಳಾದ ಹರೀಶ್ ಚಂದ್ರ ನಾಯಕ್ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News