ಮಂಗಳೂರು | ಬೀದಿ ವ್ಯಾಪಾರಕ್ಕೆ ಕಿರುಕುಳ ಆರೋಪ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಗಂಭೀರ
Update: 2025-08-22 15:59 IST
ಮಂಗಳೂರು : ಬೀದಿಬದಿ ವ್ಯಾಪಾರ ಮಾಡಲು ಮಹಿಳಾ ಬೀದಿಬದಿ ವ್ಯಾಪಾರಿಗೆ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ ಒಂದು ತಿಂಗಳಿಂದ ನಿರಂತರ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಮಹಿಳೆ ಶಾಲಿನಿ (48ವರ್ಷ) ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಹಿಳಾ ಬೀದಿಬದಿ ವ್ಯಾಪಾರಿಗೆ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ ಒಂದು ತಿಂಗಳಿಂದ ನಿರಂತರ ತೊಂದರೆ ನೀಡಿ ಮಹಿಳೆಯ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ಪಾಲಿಕೆ ಅಧಿಕಾರಿಗಳು ಆಟೋ ಪಾರ್ಕಿಗೆ ಅನುಮತಿ ನೀಡದಿದ್ದರೂ ರಾಜಕೀಯ ಒತ್ತಡದಿಂದ ತೆರವುಗೊಳಿಸಲು ಬಲವಂತಪಡಿಸಲಾಗುತ್ತಿತ್ತು, ವ್ಯಾಪಾರದಲ್ಲಿ ಅಪಾರ ನಷ್ಟ ಮತ್ತು ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯು ಗಂಭೀರ ಸ್ಥಿತಿಯಲ್ಲಿದ್ದು ಎ.ಜೆ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ ಎಂದು ತಿಳಿದು ಬಂದಿದೆ.