×
Ad

ಕರಾಟೆ | ಕಟಾದಲ್ಲಿ ಮುಹಮ್ಮದ್ ಇಯಾದ್ ಇಬ್ರಾಹಿಂ ಗಿನ್ನೆಸ್ ದಾಖಲೆ, ಕುಮಿತೆಯಲ್ಲಿ ಚಿನ್ನದ ಪದಕ

Update: 2025-02-17 20:16 IST

ಮಂಗಳೂರು: ಚೆನ್ನೈನಲ್ಲಿ ನಡೆದ ಪ್ರತಿಷ್ಠಿತ 3ನೇ WKMA ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಟಾ ವಿಭಾಗದಲ್ಲಿ ಮುಹಮ್ಮದ್ ಇಯಾದ್ ಇಬ್ರಾಹಿಂ ಗಿನ್ನೆಸ್ ದಾಖಲೆ ಮಾಡಿದ್ದಾರೆ.

ಮುಹಮ್ಮದ್ ಇಯಾದ್ ಇಬ್ರಾಹಿಂ ಮತ್ತು ಅವರ ತಂಡ 30 ನಿಮಿಷಗಳ ಕಾಲ ನಿರಂತರವಾಗಿ ಕಟಾವನ್ನು ಪ್ರದರ್ಶಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕಠಿಣ ತರಬೇತಿ, ಸಂಪೂರ್ಣ ಸಮರ ಕಲೆಗಳ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ಇದಲ್ಲದೆ ಮುಹಮ್ಮದ್ ಇಯಾದ್ ಇಬ್ರಾಹಿಂ ಅವರು ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕುಮಿತೆ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಕರಾಟೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ಸಾಬೀತುಪಡಿಸಿದರು. ಕುಮಿತೆ ಸಮರ ಕಲಾವಿದನ ಯುದ್ಧ ಕೌಶಲ್ಯಗಳ ಅಂತಿಮ ಪರೀಕ್ಷೆಯಾಗಿದ್ದು, ಚುರುಕುತನ, ಅಚಲ ಧೈರ್ಯದ ಅಗತ್ಯವಿರುತ್ತದೆ.

ಪ್ರತಿಯೋರ್ವ ಯಶಸ್ವಿ ಸಾಧಕನ ಹಿಂದೆ ಮಾರ್ಗದರ್ಶಕರಿರುತ್ತಾರೆ. ಅದರಂತೆಯೇ ನದೀಮ್ ಮತ್ತು ಝಕಿಯಾ ಅವರ ನಿರಂತರ ಬೆಂಬಲ, ಸಮರ್ಪಣೆ ಮತ್ತು ತರಬೇತಿಯಿಂದ ಮುಹಮ್ಮದ್ ಇಯಾದ್ ಇಬ್ರಾಹಿಂ ಈ ಸಾಧನೆಯನ್ನು ಮಾಡಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News