×
Ad

ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿ ಸಭೆ

Update: 2023-07-28 23:12 IST

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯಕಾರಿ ಸಮಿತಿಯ ಸಭೆಯು ಇತ್ತೀಚೆಗೆ ನಡೆಯಿತು.

ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಮಣಿಪುರದಲ್ಲಿ ದುಷ್ಕರ್ಮಿಗಳ ಗುಂಪೊಂದು ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದನ್ನು ಹಾಗೂ ಮೇ ತಿಂಗಳಿನಿಂದ ಅಲ್ಲಿ ನಡೆಯುತ್ತಿರುವ ಅಮಾನುಷ ಕೃತ್ಯಗಳ ಬಗ್ಗೆ ಸಭೆಯಯು ಖಂಡಿಸಿತು. ತಕ್ಷಣ ಕೇಂದ್ರ ಸರಕಾರವು ಕಠಿಣ ಕ್ರಮ ಜರುಗಿಸಬೇಕೆಂದು ಸಭೆ ಒತ್ತಾಯಿಸಿದೆ.

ದ.ಕ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆಯ ಬಗ್ಗೆ ಪೊಲೀಸ್ ಇಲಾಖೆಯು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸಭೆಯು ಶ್ಲಾಘಿಸಿದೆ.

ಈಗಾಗಲೆ ಕುದ್ರೋಳಿ ಪರಿಸರದಲ್ಲಿ ತನ್ನ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗಿದೆ. ಇದೇ ರೀತಿ ದ.ಕ.ಜಿಲ್ಲೆಯಾದ್ಯಂತ ಇಂತಹ ಸಮಿತಿಗಳನ್ನು ರಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಅಲ್ಹಾಜ್ ಕೆಎಸ್ ಮುಹಮ್ಮದ್ ಮಸೂದ್ ಸೂಚಿಸಿದರು.

ಇತ್ತೀಚೆಗೆ ನಿಧನರಾದ ಸಮಿತಿಯ ಕಾರ್ಯದರ್ಶಿ ಸಿ.ಎಂ.ಮುಸ್ತಫ, ಸದಸ್ಯರಾದ ಹಾಜಿ ಮುಸ್ತಫ ಕೆಂಪಿ, ಹಾಜಿ ಎಆರ್ ಅಬ್ದುಲ್ ರಹ್ಮಾನ್ ಕುದ್ರೋಳಿ, ಸಲೀಂ ಕಸೈಗಲ್ಲಿ ಅವರ ಮಗ್ಫಿರತ್‌ಗಾಗಿ ದುಆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News