×
Ad

ನಂದಾವರ ದರ್ಗಾ ಶರೀಫ್ ಉರೂಸ್ ಮುಬಾರಕ್ ಗೆ ಚಾಲನೆ

Update: 2025-01-29 12:05 IST

ಬಂಟ್ವಾಳ : ಪಾಣೆಮಂಗಳೂರು ಸಮೀಪದ ನಂದಾವರ ಕೇಂದ್ರ ಜುಮಾ ಮಸೀದಿ ಇದರ ಅಧೀನದ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವನ್ನು ಸಯ್ಯಿದ್ ಬಾತಿಷಾ ತಂಙಳ್ ಅಲ್ ಅಝ್‌ಹರಿ ಅಲ್ ಬುಖಾರಿ ಆನೆಕಲ್ಲು ಮಂಗಳವಾರ ಉದ್ಘಾಟಿಸಿ, 7 ನೇ ವಾರ್ಷಿಕ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಾವರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇದ್ದಿನಬ್ಬ ನಂದಾವರ ಧ್ವಜಾರೋಹಣಗೈದರು.

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್ ಜಝರಿ ಭಾಷಣಗೈದರು. ಕಕ್ಕಿಂಜೆ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮುಖ್ಯ ಭಾಷಣ ಮಾಡಿದರು. ಅಬ್ದುಲ್ ರಝಾಕ್ ಮಿಸ್ಬಾಹಿ ಉಸ್ತಾದ್ ಕಲಿಯಾರ್ - ಬಾಯಾರ್ ಅವರು ನೇತೃತ್ವದಲ್ಲಿ ಪ್ರಾರ್ಥನಾ ಸಂಗಮ ನಡೆಯಿತು.

ನಂದಾವರ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಖಾಸಿಂ ದಾರಿಮಿ, ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಮುಹಮ್ಮದ್ ಶರೀಫ್, ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಶಮೀರ್, ಇಸ್ಮಾಯಿಲ್ ಚಾಯಾಕ, ಮಹಮ್ಮದ್ ಎಂ.ಕೆ.ಆರ್, ಅಬ್ಬೋನಾಕ ಟೆಲಿಪೋನ್, ಹಾಜಿ ಅಬ್ದುಲ್ ಖಾದರ್, ಖಾದರ್ ಮಾಸ್ಟರ್ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮ್ಯೂಸಿಯಂ ನ ಸ್ಥಾಪಕ . ಕೆ.ಎಸ್. ಯಾಸಿರ್ ಹಾಜಿ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು

ನಂದಾವರ ಹಿದಾಯತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News