ರಾಷ್ಟ್ರಮಟ್ಟದ ಅರಬಿಕ್ ಪ್ರಬಂಧ ಸ್ಪರ್ಧೆ: ಹಮ್ದಾನ್ ಅಬ್ಬಾಸ್ ಪ್ರಥಮ
Update: 2025-09-22 15:22 IST
ಮಂಗಳೂರು: ಇತ್ತೀಚೆಗೆ ಸೌದಿ ರಾಯಭಾರ ಕಚೇರಿ ಹಾಗೂ ಕೇರಳದ ಜಾಮಿಯಾ ಅಲ್ ಹಿಂದ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಅರಬಿಕ್ ಪ್ರಬಂಧ ಬರೆಯುವ ಸ್ಪರ್ಧೆಯಲ್ಲಿ ಮಂಗಳೂರಿನ ಕಲ್ಲಾಪುವಿನಲ್ಲಿರುವ ಅಲ್ ಬಯಾನ್ ಅರಬಿಕ್ ಕಾಲೇಜಿನ ತೃತೀಯ ಪದವಿ ವಿದ್ಯಾರ್ಥಿ ಹಮ್ದಾನ್ ಅಬ್ಬಾಸ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ತಲಪಾಡಿ ಕೆ.ಸಿ.ನಗರ ನಿವಾಸಿ ಫಕ್ರುದ್ದೀನ್ ಶಮೀರ್ ಹಾಗೂ ಮರ್ಯಮ್ ಬಾನು ದಂಪತಿಯ ಪುತ್ರ.