×
Ad

ಕಣಚೂರು| ನಸೀಮಾ ಫರೀದ್ ಸ್ಮಾರಕ 11ನೇ ಉಪನ್ಯಾಸ

► ಎರಡು ದಿನಗಳ ಉಚಿತ ಕಾರ್ಯಾಗಾರ

Update: 2026-02-03 20:37 IST

ಮಂಗಳೂರು: ಕಣಚೂರು ಫಿಸಿಯೋಥೆರಪಿ ಕಾಲೇಜು ಹಾಗೂ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಯು.ಟಿ. ಫರೀದ್ ಫೌಂಡೇಶನ್ (ರಿ) ಸಹಯೋಗದಲ್ಲಿ ಫೆ. 3ರಂದು ದಿ. ನಸೀಮಾ ಫರೀದ್ ಸ್ಮಾರಕ 11ನೇ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕಾರ್ಯಕ್ರಮವನ್ನು ಮಂಗಳೂರಿನ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಸುಬ್ರಮಣ್ಯಂ ಕೆ ಉದ್ಘಾಟಿಸಿದರು.


ವೈದ್ಯಕೀಯ ಕ್ಷೇತ್ರದಲ್ಲಿ ಫಿಸಿಯೋಥೆರಪಿಯ ಮಹತ್ವದ ಕುರಿತು ಮಾತನಾಡಿದ ಅವರು, ಹೃದಯದ ಪುನಶ್ಚೇತನ, ರೋಗಿಗಳ ಚೇತರಿಕೆ ಹಾಗೂ ಆರೋಗ್ಯ ಸೇವಾ ವಿಧಾನಗಳ ಮೂಲಕ ಜೀವನಮಟ್ಟವನ್ನು ಉತ್ತಮಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ‘ಆರ್ಟ್ ಆಫ್ ಪ್ರಾಕ್ಟೀಸ್ ಇನ್ ಕಾರ್ಡಿಯೋಪಲ್ಮನರಿ ಕಂಡೀಶನ್ಸ್’ ಕುರಿತು ಡಾ. ಸುಧನ್ ಎಸ್.ಜಿ., ‘ದಿ ಗಿಫ್ಟ್ ಆಫ್ ಲೈಫ್ – ಆರ್ಗನ್ ಡೊನೇಶನ್’ ಕುರಿತು ಡಾ. ರೋಹನ್ ಮೋನಿಸ್ ಹಾಗೂ ‘ಪಲ್ಮನರಿ ರಿಹ್ಯಾಬಿಲಿಟೇಶನ್’ ಕುರಿತು ಕಿಮ್ಸ್‌ನ ರೆಸ್ಪಿರೇಟರಿ ಮೆಡಿಸಿನ್ ವಿಭಾಗದ ಡಾ. ವಿಜಯಕುಮಾರ್ ಉಪನ್ಯಾಸ ನೀಡಿದರು.


ಉಪನ್ಯಾಸ ಸರಣಿ ಹನ್ನೊಂದನೇ ವರ್ಷವೂ ನಿರಂತರವಾಗಿ ನಡೆಯುತ್ತಿದ್ದು, ವಿವಿಧ ಕಾಲೇಜುಗಳ ಇಂಟರ್ನ್‌ಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತಿದೆ ಎಂದು ಸಂಘಟಕರು ತಿಳಿಸಿದರು. ಕಾರ್ಯಾಗಾರದಲ್ಲಿ 130 ಪ್ರತಿನಿಧಿಗಳು ಭಾಗವಹಿಸಿದ್ದರು.


ಕೆಐಇಟಿ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಅಧ್ಯಕ್ಷತೆ ವಹಿಸಿದ್ದರು. ಫಿಸಿಯೋಥೆರಪಿ ಕ್ಷೇತ್ರದ ಪ್ರಗತಿ ಮತ್ತು ವ್ಯಾಪ್ತಿ ಕುರಿತು ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮುಖ್ಯ ಭಾಷಣ ಮಾಡಿದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆ ಡಾ. ವೈಶಾಲಿ ಶ್ರೀಜಿತ್, ಕೃಪಾನಿಧಿ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ. ಸುಧನ್ ಎಸ್.ಜಿ., ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಶಾನವಾಜ್ ಮಾಣಿಪ್ಪಾಡಿ ಹಾಗೂ ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಮಂಡಳಿಯ ಸದಸ್ಯ ಡಾ. ವೆಂಕಟ್ ರೈ ಪ್ರಭು ಭಾಗವಹಿಸಿದ್ದರು.

ಕಣಚೂರು ಫಿಸಿಯೋಥೆರಪಿ ಕಾಲೇಜಿನ ಡೀನ್ ಡಾ. ಮಹಮ್ಮದ್ ಸುಹೇಲ್ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಡಾ. ರೇಷ್ಮಾ ವಂದಿಸಿದರು.































Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News