ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕರಾಟೆ: ಮುಹಮ್ಮದ್ ರಯ್ಯಾನ್ ಪ್ರಥಮ
Update: 2026-01-16 20:13 IST
ಉಜಿರೆ, ಜ.16: ಹಾಸನ ಜಿಲ್ಲಾ ಕರಾಟೆ ಅಸೋಸಿಯೇಶನ್ ಮತ್ತು ಮೌಲೆ ಶೂಟೋಕಾನ್ ಕರಾಟೆ ಡೊ ಅಸೋಸಿಯೇಶನ್ ಇಂಡಿಯಾ ಸಹಯೋಗದೊಂದಿಗೆ ಹಾಸನದ ಎಂಸಿಇ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಹಾಸನ್ ಓಪನ್ 5ನೇ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಉಜಿರೆಯ ಮಹಮ್ಮದ್ ರಯ್ಯಾನ್ ಚಿನ್ನದ ಪದಕ ಹಾಗು ಟ್ರೋಫಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿರುವ ರಯ್ಯಾನ್ ಅವರು ಉಜಿರೆಯ ಉದ್ಯಮಿ ಬಿ. ಎಚ್. ಇಬ್ರಾಹಿಂ ಮತ್ತು ನೂರ್‌ಜಹಾನ್ ದಂಪತಿಯ ಪುತ್ರ. ರಯ್ಯಾನ್‌ಗೆ ಶಿಹಾನ್ ಅಬ್ದುಲ್ ರಹಿಮಾನ್ ತರಬೇತಿ ನೀಡಿದ್ದರು.