×
Ad

ಹಳೆಯಂಗಡಿ: ಮದರಸದಲ್ಲಿ ಮೌಲಿದ್ ಮಜ್ಲಿಸ್, ಮಕ್ಕಳ ಪ್ರತಿಭಾ ಕಾರ್ಯಕ್ರಮ

Update: 2023-09-30 18:48 IST

ಹಳೆಯಂಗಡಿ: ಇಲ್ಲಿನ ಕದಿಕೆ ಜುಮ್ಮಾ ಮಸೀದಿಗೆ ಒಳಪಡುವ ನೂರುಲ್ ಹುದಾ ಅಲ್ ಮದರಸತುಸ್ಸುನ್ನೀಯ್ಯ ಇದರ ವತಿಯಿಂದ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನೋತ್ಸವ ಅಂಗವಾಗಿ ಮಕ್ಕಳ ಮೌಲಿದ್ ಮಜ್ಲಿಸ್ ಹಾಗೂ ಮಕ್ಕಳ ಪ್ರತಿಭಾ ಕಾರ್ಯಕ್ರಮ ಮದರಸದ ಮುಂಭಾಗದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮವನ್ನು ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನೂರುಲ್‌ ಹುದಾ ಮದರಸದ ಸದರ್ ಮುಅಲ್ಲಿಂ ಮುಹಮ್ಮದ್ ಶರೀಫ್ ಮದನಿ ವಹಿಸಿದ್ದರು.

ಕೇಂದ್ರ ಜುಮಾ‌ ಮಸೀದಿಯ ಖತೀಬ್ ಪಿ. ಎ. ಅಬ್ದುಲ್ಲಾ ಝೈನಿ ಬಡಗನ್ನೂರು ದುವಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಮಸೀದಿಯ ಖತೀಬ್ ಕೆ.ಎಂ. ಅಬೂಬಕರ್ ಮದನಿ, ಕದಿಕೆ ಹಳೆಯಂಗಡಿ‌ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಕುಡುಂಬೂರು, ಉಪಾಧ್ಯಕ್ಷ ಹಾಜಿ ಬಶೀರ್ ಕಲ್ಲಾಪು, ಕಾರ್ಯದರ್ಶಿ ಎಚ್‌. ಕೆ. ಮುಹಮ್ಮದ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಐ. ಅಬ್ದುಲ್ ಖಾದರ್ ಸಾಗ್, ನೂರುಲ್ ಹುದಾ ಮದರಸದ ಮುಅಲ್ಲಿಂ ಅಬ್ದುಲ್ ರಾಝಿಕ್ ಮದನಿ, ಅಬ್ದುಲ್ ನಾಫಿಹ್ ಹಾಶಿಮಿ, ಇಮ್ರಾನ್ ಮಕ್‌ ದೂಮಿ, ಎಸ್.ಎಚ್. ಅಬ್ದುಲ್ ರಝಾಕ್ ಉಸ್ತಾದ್, ಜಲಾಲಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಮಾಸಿಕ ಸ್ವಲಾತ್ ಉಸ್ತುವಾರಿ ಅಬ್ದುಲ್ಲಾ ಕದಿಕೆ, ಸಿಕ್ಸರ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಅಬ್ದುಲ್‌ ಕರೀಂ ಕೃಷ್ಣಾಪುರ, ಅಬ್ದುಲ್ ಖಾದರ್ ಕೋಡಿಕಲ್, ಮುಸ್ಲಿಂ ಜಮಾತ್ ಒಕ್ಕೂಟ ಹಳೆಯಂಗಡಿ ವಲಯಾಧ್ಯಕ್ಷ ಕೆ. ಸಾಹುಲ್‌ ಹಮೀದ್‌ ಕದಿಕೆ, ಸಾಗ್ ಬದ್ರಿಯಾ ಜುಮಾ‌ ಮಸೀದಿ ಅಧ್ಯಕ್ಷ ಮುಸ್ತಾಫ ಎಂ.ಹೆಚ್, ಸಂತೆಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಅಶ್ರಫ್, ಇಂದಿರಾನಗರ ಖಿಲ್ರಿಯಾ ಮದರಸದ ಅಧ್ಯಕ್ಷ ಯೂಸುಫ್ ಇಂದಿರಾನಗರ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News