×
Ad

ಯುವತಿ ನಾಪತ್ತೆ

Update: 2023-10-02 20:54 IST

ಮಂಗಳೂರು: ನಗರದ ಯೆಯ್ಯಾಡಿ ದಂಡಕೇರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಹಾಗೂ ಸಹೋದರಿಯರೊಂದಿಗೆ ವಾಸವಿದ್ದ ಎಲ್ಲಮ್ಮ (18) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಸೆ.30ರಂದು ಬೆಳಗ್ಗೆ 9ಕ್ಕೆ ದಂಡಕೇರಿಯ ಫ್ಲ್ಯಾಟ್‌ವೊಂದಕ್ಕೆ ಕೆಲಸಕ್ಕೆಂದು ಹೋದ ಎಲ್ಲಮ್ಮ ಮರಳಿ ಬಂದಿಲ್ಲ. ಫ್ಲ್ಯಾಟ್‌ನವರಲ್ಲಿ ವಿಚಾರಿಸಿದಾಗ ಆಕೆ 3.30ಕ್ಕೆ ಮನೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಆಕೆಯ ಮೊಬೈಲ್‌ಸಿಚ್ ಆಫ್ ಆಗಿದೆ ಎಂದು ಎಲ್ಲಮ್ಮಳ ತಾಯಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News