ಎನ್‌ಐಟಿಕೆಯ ಭದ್ರತಾ ಕೊಠಡಿ ಸೇರಿದ ಅಭ್ಯರ್ಥಿಗಳ ಭವಿಷ್ಯ: ಭದ್ರತಾ ಕೊಠಡಿಯ ಸುತ್ತ ಬಿಗಿ ಭದ್ರತೆ

Update: 2024-04-26 15:16 GMT

ಸುರತ್ಕಲ್: ದ.ಕ. ಲೋಕಸಭಾ ಚುನಾವಣೆಯ ಮತ ಪೆಟ್ಟಿಗೆಗಳ ಭದ್ರತಾ ಕೊಠಡಿಯನ್ನು ಸುರತ್ಕಲ್ ಎನ್ ಐಟಿಕೆಯ ಭದ್ರತಾ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಎನ್ಐಟಿಕೆಯ ನೆಲ ಅಂತರಸ್ತಿನಲ್ಲಿರುವ ಉಪನ್ಯಾಸ ಕೊಠಡಿಯ ಎ ವಿಭಾಗದಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಪೆಟ್ಟಿಗೆಗಳ ಭದ್ರತಾ ಕೊಠಡಿಯನ್ನು ಇಡಲಾಗಿದೆ. ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಮತ ಪೆಟ್ಟಿಗೆಗಳ ಭದ್ರತಾ ಕೊಠಡಿಯನ್ನು ಎ ವಿಭಾಗದ ಉಪನ್ಯಾಸ ಕಚೇರಿ-3ರ ನೆಲ ಅಂತಸ್ತಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಎನ್ ಐಟಿಕೆ ಎ ವಿಭಾಗದ ಉಪನ್ಯಾಸ ಕಚೇರಿ 5ರ ಮೊದಲ ಮಹಡಿಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮತಗಳ ಭಧ್ರತಾ ಕೊಠಡಿ ಸಿದ್ಧವಾಗಿದ್ದು , ಸಬ್ ಸ್ಟ್ರಾಂಗ್ ರೂಮನ್ನು ನೆಲ ಅಂತಸ್ತಿನಲ್ಲಿ ಮಾಡಲಾಗಿದೆ.

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮತಗಳನ್ನು ಎನ್ ಐಟಿಕೆಯ ಎ ವಿಭಾಗದ ಮೊದಲ ಮಹಡಿಯಲ್ಲಿರುವ ಉಪನ್ಯಾಸ ಹಾಲ್ ನ 6ರಲ್ಲಿ ಭದ್ರತಾ ಕೊಠಡಿ ನಿರ್ಮಾ‌ಣ‌ ಮಾಡಲಾಗಿದ್ದು, ಉಪ ಭದ್ರತಾ ಕೊಠಡಿಯನ್ನು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಮಾಡಲಾಗಿದೆ‌.

204 ಮಂಗಳೂರು ವಿಧಾನ ಸಭಾ ಕ್ಷೇತ್ರದ ಭದ್ರತಾ ಕೊಠಡಿಯನ್ನು ಎ ವಿಭಾಗದ ಎರಡನೇ ಮಹಡಿಯಲ್ಲಿರುವ ಉಪನ್ಯಾಸ ಸಭಾಂಗಣ 8ರಲ್ಲಿ ಮಾಡಲಾಗಿದ್ದು, ಉಪ ಭದ್ರತಾ ಕೊಠಡಿಯನ್ನು ನೆಲ ಅಂತಸ್ತಿನಲ್ಲಿ ಮಾಡಲಾಗಿದೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ಎ ವಿಭಾಗದಲ್ಲಿರುವ ಕೇಂದ್ರ ಗ್ರಂಥಾಲಯದ 2ಎ ಕೊಠಡಿಯಲ್ಲಿ ನಿರ್ಮಿಸಲಾಗಿದ್ದು, ಉಪ ಭದ್ರತಾ ಕೊಠಡಿಯನ್ನು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಮಾಡಲಾಗಿದೆ‌.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ಎ ವಿಭಾಗದ ಎರಡನೇ ಅಂತಸ್ತಿನ ಉಪನ್ಯಾಸ ಕೊಠಡಿ 10ರಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಉಪ ಭಧ್ರತಾ ಕೊಠಡಿಯನ್ನು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ದ.ಕ.‌ಜಿಲ್ಲೆಯ ಅತೀ ದೊಡ್ಡ ವಿಧಾನ ಸಭಾ ಕ್ಷೇತ್ರವಾದ 207 ಸುಳ್ಯ ವಿಧಾನ ಸಭಾ ಕ್ಷೇತ್ರದ ಮತಪೆಟ್ಟಿಗೆಗಳಿಗೆ ಕೇಂದ್ರ ಗ್ರಾಂಥಾಲಯದ ಎರಡನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಗ್ರಂಥಾಲಯದ ಭದ್ರತಾ ಕೊಠಡಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಮತ ಪೆಟ್ಟಿಗೆಗಳ ಉಪ ಭದ್ರತಾ ಕೊಠಡಿಯನ್ನು ಮಾಡಲಾಗಿದೆ.

ಕೇಂದ್ರ ಗ್ರಂಥಾಲಯದ ಕೆಳ ಅಂತಸ್ತಿನಲ್ಲಿರುವ ಹಳೆಯ ಗ್ರಂಥಾಲಯದ ವಾಚನಾಯಲದಲ್ಲಿ ಪೋಸ್ಟಲ್ ಮತಪತ್ರ ಗಳಿರುವ ಪೆಟ್ಟಿಗೆಗಳನ್ನು ಇಡಲಾಗಿದೆ.

ಬಿಗಿ ಭದ್ರತೆ

ಶುಕ್ರವಾರ ನಡೆದ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಭವಿಷ್ಯ ಎನ್ ಐಟಿಕೆಯ ಭದ್ರತಾ ಕೊಠಡಿ ಗಳಲ್ಲಿ ಭದ್ರವಾಗಿದ್ದು, ಜೂ.4ರಂದು ಮತಗಳ ಎಣಿಕೆ‌ ನಡೆಯಲಿದೆ. ಅಲ್ಲಿಯ ವರೆಗೆ ಭದ್ರತಾ ಕೊಠಡಿಗಳಿಗೆ ಈಗಾಗಲೇ ಸಿಎಆರ್‌ ವಿಭಾಗದ ಡಿಸಿಪಿ ಸಿದ್ದನಗೌಡ ಪಟೀಲ್‌ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಎನ್ ಐಟಿಕೆಯಲ್ಲಿ ಮಾಡಲಾಗಿರುವ ಮತಪೆಟ್ಟಿಗೆಗಳ ಭದ್ರತಾ ಕೊಠಡಿಗೆ ಮೂರು ಪಾಳಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರತೀ ಪಾಳಿಯಲ್ಲಿ 40 ಮಂದಿ ಸಿವಿಲ್ ಪೊಲೀಸರು, 40 ಸಶಸ್ತ್ರ ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆಯ 8 ಮಂದಿ ಜವಾನರು ಭದ್ರತೆ ಒದಗಿಸಲಿದ್ದಾರೆ‌. ಜೊತೆಗೆ ಭದ್ರತಾ ಕೊಠಡಿಯ ಸುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಶ್ವಾನ ದಳ ಭದ್ರತೆಯಲ್ಲಿ ಇರಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News