ಕೆಸಿಎಫ್ ಡಿಸೇನಿಯಂ: ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

Update: 2024-04-27 13:13 GMT

ಮಂಗಳೂರು, ಎ.27: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ದಶವಾರ್ಷಿಕ ಸಮ್ಮೇಳನ (ಡಿಸೇನಿಯಂ) ಇದೇ ಬರುವ ಮೇ 19ರಂದು ಮಂಗಳೂರಿನ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದ್ದು ಇದರ ಸ್ವಾಗತ ಸಮಿತಿಯ ಕಚೇರಿಯನ್ನು ಅಲ್ ಮರ್ಕಝುಲ್ ಇಸ್ಲಾಮಿ ಕಣ್ಣೂರಿನಲ್ಲಿ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.

ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹೈಸಮ್ ಶಾಕಿರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಡಾ.ಝೈನಿ ಕಾಮಿಲ್ ಸಖಾಫಿ, ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಜಿಎಂ ಕಾಮಿಲ್ ಸಖಾಫಿ, ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು, ಹಾಜಿ ಬಿ ಎಂ ಮಮ್ತಾಝ್ ಅಲಿ ಈ ಸಂದರ್ಭದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ ಪಿ ಹಂಝ ಸಖಾಫಿ, ಕೆ ಎಂ ಸಿದ್ದೀಕ್ ಮೋಂಟುಗೋಳಿ, ಹಾಫಿಳ್ ಸುಫ್ಯಾನ್ ಸಖಾಫಿ, ಎನ್ ಎಸ್ ಅಬ್ದುಲ್ಲಾ ಹಾಜಿ ಅಲ್ ಕೋಬರ್ , ಅಸ್ರು ಬಜ್ಪೆ , ತೌಫೀಕ್ ಅಂಬಾಗಿಲು ಜುಬೈಲ್, ಹಮೀದ್ ಮುಸ್ಲಿಯಾರ್ ಸೌದಿ, ಅಬೂಬಕರ್ ಮದನಿ ದುಬೈ, ಅಬ್ದುಲ್ ರಹಿಮಾನ್ ರಝ್ವಿ ಕಲ್ಕಟ್ಟ, ಹಾಫಿಳ್ ಯಾಕೂಬ್ ಸಅದಿ ನಾವೂರು, ಇಬ್ರಾಹಿಂ ಖಲೀಲ್ ಮಾಲಿಕಿ, ರಹೀಂ ಸಅದಿ ಕತ್ತರ್, ಅಬ್ದುಲ್ ರಹಿಮಾನ್ ಹಾಜಿ ಪ್ರಿಂಟೆಕ್, ಕೆ ಎಂ ಮುಸ್ತಫಾ ನಯೀಮಿ, ಮಹಬೂಬ್ ಸಖಾಫಿ ಕಿನ್ಯ, ನವಾಜ್ ಸಖಾಫಿ ಅಡ್ಯಾರ್, ಮನ್ಸೂರ್ ಅಲಿ ಶಿವಮೊಗ್ಗ,ಇರ್ಷಾದ್ ಹಾಜಿ ಗೂಡಿನಬಳಿ ಮತ್ತಿತರರು ಉಪಸ್ಥಿತರಿದ್ದರು.

ಡಿಸೇನಿಯಂ ವರ್ಕಿಂಗ್ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿ ಸಯ್ಯಿದ್ ಇಸಾಕ್ ತಂಳ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News