×
Ad

ಅಮೆಮ್ಮಾರ್: ಎಸ್ಕೆಎಸ್ಸೆಸ್ಸೆಫ್ ನಿಂದ ರಕ್ತದಾನ ಶಿಬಿರ

Update: 2024-07-07 12:33 IST

ಫರಂಗಿಪೇಟೆ, ಜು.7: ಎಸ್ಕೆಎಸ್ಸೆಸ್ಸೆಫ್ ಫರಂಗಿಪೇಟೆ ಕ್ಲಸ್ಟರ್ ಹಾಗೂ ಅಮೆಮ್ಮಾರ್ ಶಾಖೆ, ವಿಖಾಯ ರಕ್ತದಾನಿ ಬಳಗ ದ.ಕ. ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಹೈಲ್ಯಾಂಡ್ ಆಸ್ಪತ್ರೆಯ ವತಿಯಿಂದ ಉಚಿತ ಮದುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ರವಿವಾರ ಅಮೆಮ್ಮಾರ್ ಮಸೀದಿ ಹಾಲ್ ನಲ್ಲಿ ನಡೆಯಿತು.

ಅಮೆಮ್ಮಾರ್ ಬದ್ರಿಯಾ ಮದ್ರಸದ ಮುಖ್ಯ ಅಧ್ಯಾಪಕ ಅಬೂಬಕರ್ ಸಿದ್ದೀಕ್ ದಾರಿಮಿ ಶಿಬಿರವನ್ನು ಉದ್ಘಾಟಿಸಿದರು. ಇರ್ಷಾದ್ ದಾರಿಮಿ ಮಿತ್ತಬೈಲ್ ದುಆಗೈದರು. ಬದ್ರಿಯಾ ಮಸೀದಿಯ ಅಧ್ಯಕ್ಷ ಉಮರಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,

ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ, ಅಕ್ಕರಂಗಡಿ ಮಸೀದಿಯ ಖತೀಬ್ ಅಬೂಸ್ವಾಲಿಹ್ ಫೈಝಿ ಮುಖ್ಯ ಭಾಷಣ ಮಾಡಿದರು

ಮುಖ್ಯ ಅತಿಥಿಗಳಾಗಿ ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂ ಸ್ವಾಲಿಹ್ ಉಸ್ತಾದ್, ಫರಂಗಿಪೇಟೆ ಮಸೀದಿ ಖತೀಬ್ ಝಕರಿಯಾ ದಾರಿಮಿ, ಅಮೆಮ್ಮಾರ್ ಮಸೀದಿ ಉಪಾಧ್ಯಕ್ಷ ಎಫ್.ಎ.ಖಾದರ್, ಫರಂಗಿಪೇಟೆ ಮಸೀದಿಯ ಅಧ್ಯಕ್ಷ ಉಮರ್ ಫಾರೂಕ್, ಕೋಶಾಧಿಕಾರಿ ಮಜೀದ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್, ಸದಸ್ಯ ರಝಾಕ್ ಅಮೆಮ್ಮಾರ್, ಫರಂಗಿಪೇಟೆ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಸನಬ್ಬ ಗುಡ್ಡೆಮನೆ, ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಉಪಾಧ್ಯಕ್ಷ ರಶೀದ್ ಹನೀಫಿ, ಸಹಚಾರಿ ದ.ಕ. ಜಿಲ್ಲಾ ವೆಸ್ಟ್ ಚೇರ್ಮನ್ ನಝೀರ್ ವಳಚ್ಚಿಲ್, ಫರಂಗಿಪೇಟೆ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ಲ ಎಂ.ಕೆ.ಬಿ., ಪ್ರಧಾನ ಕಾರ್ಯದರ್ಶಿ ಶಾಕಿರ್ ಕುಂಪನಮಜಲು, ಅಮೆಮ್ಮಾರ್ ಯುನಿಟ್ ಅಧ್ಯಕ್ಷ ಝುಬೈರ್, ಅಝೀಝ್ ಎಎಸ್ಬಿ, ಶಾಜೀದ್ ಒಡೆಯರ್ ಮತ್ತಿತರರು ಭಾಗವಹಿಸಿದ್ದರು

ಇದೇವೇಳೆ ಹೈಲ್ಯಾಂಡ್ ಆಸ್ಪತ್ರೆಯ ಮಾಲಕ ಡಾ.ಸಿ.ಪಿ.ಅಬ್ದುಲ್ಲಾ ಯಾಸೀರ್, ಎಸ್.ವೈ.ಎಸ್. ರೆಂಜಲಾಡಿ ಶಾಖೆ ಅಧ್ಯಕ್ಷ ಎಂ.ಎ.ಅಬ್ದುಲ್ಲಾ ರೆಂಜಲಾಡಿ, ಸಹಚಾರಿ ರಾಜ್ಯ ಸಮಿತಿಯ ಸದಸ್ಯ ಇಮ್ರಾನ್ ಮಾರಿಪಲ್ಲರನ್ನು ಸನ್ಮಾನಿಸಲಾಯಿತು.

ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ನಿಯಾಝ್ ಫೈಝಿ ಸ್ವಾಗತಿಸಿದರು. ರಶೀದ್ ಹನೀಫಿ ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News