ಪರ್ಲೊಟ್ಟು: ಅಬೂಬಕರ್ ಸಿದ್ದೀಕ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಪಿ.ಕೆ.ರಶೀದ್ ಪರ್ಲೊಟ್ಟು
Update: 2025-01-22 10:58 IST
ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮದ ಪರ್ಲೊಟ್ಟು ಅಬೂಬಕರ್ ಸಿದ್ದೀಕ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಪಿ.ಕೆ.ರಶೀದ್ ಪರ್ಲೊಟ್ಟು ಆಯ್ಕೆಯಾಗಿದ್ದಾರೆ.
ಮಸೀದಿಯ ಗೌರವಾಧ್ಯಕ್ಷ ಹಾಜಿ ಪಿ.ಕೆ.ಆದಂ ದಾರಿಮಿ ನೇತೃತ್ವದಲ್ಲಿ ಮಸೀದಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಸಮದ್ ಪರ್ಲೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪರ್ಲೊಟ್ಟು, ಕಾರ್ಯದರ್ಶಿಯಾಗಿ ಆಶಿಕ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಕೆ.ಬಿ.ಕಾಸಿಂ ಹಾಜಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲತೀಫ್ ನೇರಳಕಟ್ಟೆ, ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಪಿ.ಕೆ.ಝುಬೈರ್, ಜುನೈದ್, ಸಲೀಂ , ಹೈದರ್, ಇಸ್ಮಾಯೀಲ್ ಕೆ.ಬಿ., ಫಾರೂಕ್ ಹನೀಫಿಯವರನ್ನು ಸಭೆಯಲ್ಲಿ ಆರಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಹೈದರ್ ಪರ್ಲೊಟ್ಟು ಅಧ್ಯಕ್ಷತೆ ವಹಿಸಿದ್ದರು. ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಆಶಿಕ್ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಪಿ.ಕೆ.ಝುಬೈರ್ ವಂದಿಸಿದರು.