×
Ad

ಎ.27ರೊಳಗೆ ಹಜ್ ಕೊನೆಯ ಕಂತು ಪಾವತಿಗೆ ಸೂಚನೆ

Update: 2024-04-15 15:37 IST

ಮಂಗಳೂರು, ಎ.15: ಭಾರತೀಯ ಹಜ್ ಕಮಿಟಿಯ ಮೂಲಕ ಪವಿತ್ರ ಹಜ್ ಯಾತ್ರೆಗೆ ಹೊರಟಿರುವ ಯಾತ್ರಾರ್ಥಿಗಳು ಕೊನೆಯ ಕಂತನ್ನು ಎ.27ರೊಳಗೆ ಪಾವತಿಸಬೇಕು ಎಂದು ರಾಜ್ಯ ಹಜ್ ಕಮಿಟಿಯ ಸದಸ್ಯ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಳ್ ಸೂಚನೆ ನೀಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ಹಜ್‌ಗೆ ತೆರಳುವವರಿಗೆ 3,43,500 ರೂ. ದರ ನಿಗದಿಯಾಗಿದೆ. ಈ ಪೈಕಿ ಈಗಾಗಲೆ 2,51,800 ರೂ.ವನ್ನು ಪಾವತಿಸಲಾಗಿದೆ. ಉಳಿದ 91,700 ರೂ.ವನ್ನು ಎ.27ರೊಳಗೆ ಪಾವತಿಸಬೇಕು. ದ.ಕ.ಜಿಲ್ಲೆಯ ಯಾತ್ರಾರ್ಥಿಗಳಿಗೆ ಎಂದಿನಂತೆ ಮಂಗಳೂರು ಯೆನೆಪೊಯ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಶನ್ ನೀಡಲಿದ್ದು, ಶೀಘ್ರ ದಿನಾಂಕ ಪ್ರಕಟಿಸಲಾಗುವುದು ಎಂದು ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News