×
Ad

ನ.14: ದ.ಕ. ಜಿಲ್ಲೆಯ ಸಮಸ್ತ ಮದ್ರಸಗಳಿಗೆ ರಜೆ

Update: 2023-11-11 21:15 IST

ಮಂಗಳೂರು, ನ.11: ಪುತ್ತೂರು ಸಾಲ್ಮರ ಶಂಸುಲ್ ಉಲಮಾ ನಗರದಲ್ಲಿ ನ.14ರಂದು ಸಮಸ್ತ ಕರ್ನಾಟಕ ಮುಷಾವರ ವತಿಯಿಂದ ಉಲಮಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ಮದ್ರಸಗಳ ಅಧ್ಯಾಪಕರ ಸಹಿತ ಉಲಮಾಗಳೆಲ್ಲರೂ ಭಾಗವಹಿಸಬೇಕಾದ ಕಾರಣ ಅಂದು ದ.ಕ.ಜಿಲ್ಲೆಯ ಎಲ್ಲಾ ಮದ್ರಸಗಳಿಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅನುಮತಿ ಮೇರೆಗೆ ರಜೆ ಸಾರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಸಮ್ಮೇಳನಕ್ಕೆ ಅಧ್ಯಾಪಕರ ಹಾಜರಾತಿಯನ್ನು ಮದ್ರಸ ಆಡಳಿತ ಮಂಡಳಿ ಖಚಿತಪಡಿಸಿಕೊಳ್ಳಲು ಈ ಸಮ್ಮೇಳನಕ್ಕೆ ಭಾಗವಹಿಸುವ ಎಲ್ಲಾ ಮದ್ರಸ ಆಧ್ಯಾಪಕರಿಗೆ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಅದರ ಆಧಾರದ ಮೇಲೆ ಕರ್ತವ್ಯಕ್ಕೆ ಅವಧಿ (ಡ್ಯೂಟಿ ಲೀವ್) ನೀಡಲಾಗುವುದು ಎಂದು ಸಮಸ್ತ ದ.ಕ. ಜಿಲ್ಲಾಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ, ಕಾರ್ಯಧ್ಯಕ್ಷ ಕೆ.ಎಂ ಉಸ್ಮಾನ್ ಫೈಝಿ ತೋಡಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News