ಬಿಐಟಿಯಲ್ಲಿ ʼಪ್ರಾಜೆಕ್ಟ್ ಸ್ಪಾರ್ಕ್ 2025ʼ ಕಾರ್ಯಕ್ರಮ
ಮಂಗಳೂರು: ವಿದ್ಯಾರ್ಥಿಗಳ ಸೃಜನಶೀಲತೆ, ಆವಿಷ್ಕಾರಕ ಗುಣ ಹಾಗೂ ತಾಂತ್ರಿಕ ಕೌಶಲಗಳನ್ನು ಪ್ರದರ್ಶಿಸಲು ಪ್ರೋತ್ಸಾಹ ನೀಡುವ ಅತ್ಯುತ್ತಮ ವೇದಿಕೆಯಾದ ʼಪ್ರಾಜೆಕ್ಟ್ ಸ್ಪಾರ್ಕ್ 2025ʼ ಅನ್ನು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ (BIT) ಎಂಜಿನಿಯರಿಂಗ್ ವಿಭಾಗವು ತನ್ನ ವಿದ್ಯಾರ್ಥಿ ಸಂಘಟನೆಯಾದ ಬ್ಯಾಸ್ಪೈರ್ ನೊಂದಿಗೆ ಯಶಸ್ವಿಯಾಗಿ ಆಯೋಜಿಸಿತು.
ಅವ್ವಬಿ ಶಾಹ್ನಾರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈ ಕಾರ್ಯಕ್ರಮದಲ್ಲಿ ಪ್ರಯೋಗಗಳ ಮೂಲಕ ಕಲಿಕೆ, ಹಾಲಿ ಸಾಮಾಜಿಕ ಸನ್ನಿವೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಕೋಣೆಯ ಜ್ಞಾನವನ್ನು ಬಳಸುವಂತೆ ಉತ್ತೇಜಿಸುವುದರ ಮಹತ್ವವನ್ನು ಕಾರ್ಯಕ್ರಮ ಸಮನ್ವಯ ವಿಭಾಗದ ಮುಖ್ಯಸ್ಥ ಅಬ್ದುಲ್ಲಾ ಗುಬ್ಬಿ ವಿವರಿಸಿದರು.
ಬ್ಯಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಎಸ್.ಐ.ಮಂಜೂರು ಬಾಷಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೂತನವಾಗಿ ಪರಿಚಯವಾಗುತ್ತಿರುವ ತಂತ್ರಜ್ಞಾನಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ತಾಂತ್ರಿಕ ಪ್ರಯೋಗಗಳನ್ನು ಪ್ರದರ್ಶಿಸಲಾಯಿತು.
ಶಾಬಾಝ್ ಎಸ್.ಎಂ. ಹಾಗೂ ನಿಧಾ ಈ ಕಾರ್ಯಕ್ರಮ ನಿರೂಪಿಸಿದರು.