×
Ad

ಪ್ರವಾದಿಯವರ ಜೀವನ ನಮಗೆ ಮಾರ್ಗದರ್ಶನ: ಸ್ಪೀಕರ್ ಯುಟಿ ಖಾದರ್

ಕೋಟೆಪುರದಿಂದ ದರ್ಗಾವರೆಗೆ ಬೃಹತ್ ಮಿಲಾದುನ್ನಭಿ ರ್‍ಯಾಲಿ

Update: 2025-09-05 12:12 IST

ಉಳ್ಳಾಲ: ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ (402) ಹಾಗೂ ಸೈಯದ್‌ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮ ದಿನ ಪ್ರಯುಕ್ತ ಬೃಹತ್ ಮಿಲಾದುನ್ನಭಿ ರ್‍ಯಾಲಿ ಶುಕ್ರವಾರ ನಡೆಯಿತು

ಕೋಡಿ ಜುಮಾ ಮಸೀದಿ ಖತೀಬ್ ಇರ್ಶಾದ್ ಸಖಾಫಿ ದುಆ ನೆರವೇರಿಸಿದರು. ರ್‍ಯಾಲಿ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ಯುಟಿ ಖಾದರ್ ಅವರು, ಶಾಂತಿ ಸೌಹಾರ್ದತೆಯನ್ನು ಸಾರಿದ ಪ್ರವಾದಿ ಮುಹಮ್ಮದ್ ( ಸ) ರವರ ಜೀವನ ನಮಗೆ ಮಾರ್ಗದರ್ಶನ ಆಗಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು, ಸಮಾಜ ನಿರ್ಮಾಣ ಮಾಡಬೇಕು ಎಂದರು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಟೆಪುರ ಮಸೀದಿಯಿಂದ ಉಳ್ಳಾಲ ದರ್ಗಾ ವರೆಗೆ ಕಾಲ್ನಡಿಗೆಯಲ್ಲಿ ಶಾಂತಿಯುತ ಮಿಲಾದುನ್ನಭಿ ರ್‍ಯಾಲಿ ನಡೆಯಿತು. ಐದು ಕರಿಯದ 28 ಮೊಹಲ್ಲಾಗಳ ವಿದ್ಯಾರ್ಥಿಗಳು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್ ಮೋನು, ಮಾಜಿ ಅಧ್ಯಕ್ಷ ಯು.ಎಸ್.ಹಂಝ, ಸದಸ್ಯರಾದ ಅಬ್ದುಲ್ ಖಾದರ್, ಝೈನುದ್ದೀನ್ ಮೇಲಂಗಡಿ, ಇಸ್ಹಾಕ್ ಮೇಲಂಗಡಿ ಅಬ್ದುಲ್ ಖಾದರ್ ಕೋಡಿ , ಪಟ್ಲ ಮಸೀದಿ ಖತೀಬ್ ಮುಹಮ್ಮದ್ ಫೈಝಿ ಮೋಙಂ ಪಟ್ಲ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ನೌಮಾನ್ ನೂರಾನಿ, ನಜೀಮ್ ನೂರಾನಿ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ನಗರಸಭೆ ಕೌನ್ಸಿಲರ್ ಬಾಝಿಲ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು

ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News