×
Ad

ಪುತ್ತೂರು | ಹಲ್ಲೆ ಪ್ರಕರಣ: ಆರೋಪಿಯ ಬಂಧನ

Update: 2025-11-29 23:58 IST

ಸಾಂದರ್ಭಿಕ ಚಿತ್ರ | PC : freepik

ಪುತ್ತೂರು, ನ.29: ನಗರದ ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎನ್‌ಟಿ ಕ್ಲಿನಿಕ್‌ನ ಸಿಬ್ಬಂದಿಗೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿ, ಪೀಠೋಪಕರಣಗಳಿಗೆ ಹಾನಿಯುಂಟು ಮಾಡಿರುವ ಘಟನೆ ಶನಿವಾರ ನಡೆದಿದೆ.

ಘಟನೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹೀಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೊಳಗಾದವರು.

ಶನಿವಾರ ಬೆಳಗ್ಗೆ 6:30ರ ವೇಳೆ ಬಂದ ಇಬ್ರಾಹೀಂ ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದರು. ಸಿಬ್ಬಂದಿ ಟೋಕನ್ ಪ್ರಕಾರವೇ ಕಳುಹಿಸುವುದಾಗಿ ತಿಳಿಸಿದಾಗ ಮಾತಿನ ಚಕಮಕಿ ನಡೆದು, ಕ್ಲಿನಿಕ್‌ನ ಸಿಬ್ಬಂದಿ ಶ್ರೀಕಾಂತ್‌ಗೆ ಆರೋಪಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕ್ಲಿನಿಕ್‌ನ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕ್ಲಿನಿಕ್‌ನ ವೈದ್ಯ ಡಾ.ರಾಮಮೋಹನ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News