×
Ad

Puttur | ಮಾದಕ ವಸ್ತು ಮಾರಾಟ ಯತ್ನ : ಆರೋಪಿ ಬಂಧನ

Update: 2025-12-04 09:02 IST

ಪುತ್ತೂರು ತಾಲೂಕಿನ ಕಬಕ ಗ್ರಾಮದ ಮುರದ ರೈಲ್ವೇ ಸೇತುವೆ ಬಳಿ ಮಾದಕವಸ್ತು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯಂತೆ ಪುತ್ತೂರು ನಗರ ಪೊಲೀಸ್‌ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ತಂಡ ಸ್ಥಳಕ್ಕೆ ದಾಳಿ ನಡೆಸಿ ಮಾದಕ ವಸ್ತು ಸಹಿತ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ಮು ಪುತ್ತೂರು ತಾಲೂಕಿನ ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದೆ. ಆತನೊಂದಿಗೆ ಇದ್ದ ದ್ವಿಚಕ್ರ ವಾಹನ ಹಾಗೂ ಕೈಯಲ್ಲಿದ್ದ ವಸ್ತುಗಳನ್ನು ತಪಾಸಣೆ ನಡೆಸಿದ ವೇಳೆ, ಮಾರಾಟಕ್ಕೆ ಇಟ್ಟಿದ್ದ 10 ಗ್ರಾಂ MDMA ಎಂಬ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ.

ಆರೋಪಿಯನ್ನು ವಶಕ್ಕೆ ಪಡೆದು, NDPS ಕಾಯ್ದೆ ಕಲಂ 8(C), 22(b) ಅಡಿ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಸಂಖ್ಯೆ 119/2025ರಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News