×
Ad

ಪುತ್ತೂರು ನಗರಸಭೆ ಸದಸ್ಯ ಶಕ್ತಿಸಿನ್ಹಾ ನಿಧನ

Update: 2023-10-17 10:47 IST

ಪುತ್ತೂರು, ಅ.17: ಕಾಂಗ್ರೆಸ್ ಮುಖಂಡ, ಪುತ್ತೂರು ನಗರಸಭೆ ಸದಸ್ಯ ನೆಲ್ಲಿಕಟ್ಟೆ ನಿವಾಸಿ ಶಕ್ತಿಸಿನ್ಹಾ(65) ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನ ಹೊಂದಿದರು.

ತನ್ನ ಕಿರಿಯ ಮಗಳ ಜೊತೆ ವಾಸವಿದ್ದ ಶಕ್ತಿ ಸಿನ್ಹಾರಿಗೆ ಇಂದು ಮುಂಜಾನೆ ತೀವ್ರ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News