×
Ad

ಆ.15 ರಂದು ಎಸ್ ವೈ ಎಸ್ ವತಿಯಿಂದ ದೇರಳಕಟ್ಟೆ ಯಲ್ಲಿ ರಾಷ್ಟ್ರ ರಕ್ಷಾ ಸಂಗಮ

Update: 2024-08-13 14:15 IST

 ಉಳ್ಳಾಲ : ಸುನ್ನೀ ಯುವಜನ ಸಂಘ ಕೇಂದ್ರ ಸಮಿತಿ ನೀಡಿದ ಸೂಚನೆ ಮೇರೆಗೆ ದ.ಕ‌ಜಿಲ್ಲಾ ಎಸ್ ವೈ ಎಸ್ ವತಿಯಿಂದ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವನ್ನು ಆ.15 ಗುರುವಾರ ಸಂಜೆ 4 ಗಂಟೆಗೆ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

ಅವರು ತೊಕ್ಕೊಟ್ಟು ವಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಗಸ್ಟ್ 15 ಸ್ವಾತಂತ್ರ್ಯ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮ ದಲ್ಲಿ ಸಮಸ್ತ ಹಿರಿಯ ನಾಯಕರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಮೀರ್ ತಂಜಳ್, ಬಂಬ್ರಾಣ ಅಬ್ದುಲ್ ಖಾದರ್ ಮುಸ್ಲಿಯಾರ್, ತೋಡಾರ್ ಉಸ್ಮಾನ್ ಫೈಝಿ, ಯು.ಟಿ.ಖಾದರ್, ರಮಾನಾಥ ರೈ, ವಂ. ಫಾ. ವಿಕ್ಟರ್. ಡಿ ಮೆಲ್ಲೊ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಅನೀಸ್ ಕೌಸರಿ, ಮುಹಮ್ಮದ್ ಮೌಲವಿ ಮುಂಡೋಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೇರ್ಮನ್ ನಝೀರ್ ಉಳ್ಳಾಲ, ಕೋಶಾಧಿಕಾರಿ ಸ್ವಾಗತ್ ಅಬೂಬಕರ್ ಹಾಜಿ ದೇರಳಕಟ್ಟೆ ,ಜನರಲ್ ಕನ್ವಿನರ್ ಮುಸ್ತಫ ಫೈಝಿ ಕಿನ್ಯ ,ಸಂಚಾಲಕ ಸೆಯ್ಯದ್ ಅಲಿ ದೇರಳಕಟ್ಟೆ ,ಹಿದಾಯತುಲ್ಲಾ ಉಚ್ಚಿಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News