ಎಸ್‌ಐಆರ್ : ಯಾವೊಬ್ಬರೂ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಲು ಎಸ್‌ವೈಎಸ್ ಮನವಿ
ಮುಡಿಪು,ಜ.13: ಕಡ್ಡಾಯ ಮತದಾರರ ಪಟ್ಟಿ ಪರಿಷ್ಕರಣೆ ಮ್ಯಾಪಿಂಗ್ ಕಾರ್ಯಭರದಿಂದ ನಡೆಯುತ್ತಿದೆ. ರಾಜ್ಯದ ಯಾವುದೇ ಪ್ರಜೆಗಳು ಇದರಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಎಸ್‌ವೈಎಸ್ ದ.ಕ.ಜಿಲ್ಲಾ ಸಮಿತಿ ಮನವಿ ಮಾಡಿದೆ.
ಎಸ್‌ವೈಎಸ್ ದ.ಕ. ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆಯಲ್ಲಿ ಮುಡಿಪುವಿನ ಗೌಸಿಯ ಮದ್ರಸ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಎಲ್ಲಾ ಘಟಕಗಳಿಗೆ ಮಾಹಿತಿ ನೀಡಲಾಯಿತು. ಈ ಸಂಬಂಧ ಎಸ್‌ವೈಎಸ್ ಯುನಿಟ್ ಸಮಿತಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸು ವಂತೆ ಮತ್ತು ಈ ಬಗ್ಗೆ ಹೆಲ್ಪ್‌ಡೆಸ್ಕ್ ತೆರೆಯುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್, ಉಪಾಧ್ಯಕ್ಷರಾದ ಬದ್ರುದ್ದೀನ್ ಅಝ್‌ಅರಿ,ಯಾಕೂಬ್ ಸಅದಿ ನಾವೂರು, ತೌಸೀಫ್ ಸಅದಿ ಹರೇಕಳ, ನವಾಝ್ ಸಖಾಫಿ ಅಡ್ಯಾರ್, ನಝೀರ್ ಹಾಜಿ ಲುಲು, ಕಾರ್ಯದರ್ಶಿ ಗಳಾದ ಮಹ್ಮೂದ್ ಸಅದಿ ಕುಕ್ಕಾಜೆ, ಮುತ್ತಲಿಬ್ ವೇಣೂರು, ಫಾರೂಕ್ ಶೇಡಿಗುರಿ, ಹಸನ್ ಪಾಂಡೇಶ್ವರ, ಇಸಾಕ್ ಉಳ್ಳಾಲ ಉಪಸ್ಥಿತರಿದ್ದರು.
ಎಸ್‌ವೈಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿದರು.