×
Ad

ಎಸ್.ಜೆ.ಎಂ. ಮುಅಲ್ಲಿಂ ಮೆಹರ್ ಜಾನ್ : ಕೈಪಿಡಿ ಬಿಡುಗಡೆ, ಮಾಹಿತಿ ಕಾರ್ಯಾಗಾರ

Update: 2023-08-17 21:29 IST

ಮಂಗಳೂರು, ಆ.17: ಮುಅಲ್ಲಿಂ ವಿದ್ವಾಂಸರ ಸಾಹಿತ್ಯ ಅಭಿರುಚಿಗಳ ಅನಾವರಣ ಹಾಗೂ ಪ್ರೋತ್ಸಾಹಕ್ಕಾಗಿ, ರಾಜ್ಯಾದ್ಯಂತ ಸಾವಿರಾರು ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಸಹಸ್ರಾರು ಅಧ್ಯಾಪಕರಿಗಾಗಿ, ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಸಮಿತಿಯು, ಅರಳಿದ ಸಾಹಿತ್ಯ ಬೆಳಗಿದ ಸಮಾಜ ಎಂಬ ಘೋಷಾ ವಾಕ್ಯದೊಂದಿಗೆ ಮುಅಲ್ಲಿಂ ಮೆಹರ್ ಜಾನ್ - 2023 (ಪ್ರತಿಭಾ ಕಾರ್ಯಕ್ರಮ) ಹಮ್ಮಿಕೊಂಡಿದೆ.

ಅಕ್ಟೋಬರ್ 10 ರಿಂದ ನವೆಂಬರ್ 18 ಯ ತನಕ, ರೇಂಜ್, ರೆನ್, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ. ರಾಜ್ಯ ಮಟ್ಟದ (ಸಮಾರೋಪ) ಸ್ಪರ್ಧೆಯು ನವೆಂಬರ್ 18 ರಂದು ಕಾವಳಕಟ್ಟೆ ಖಾದಿಸಿಯ್ಯ ಕ್ಯಾಂಪಸ್ ನಲ್ಲಿ ಜರುಗಲಿದೆ.

ಇದರ ಮಾಹಿತಿಯನ್ನೊಳಗೊಂಡ ಕೈಪಿಡಿ ಹಾಗೂ ಪೋಸ್ಟರ್ ಬಿಡುಗಡೆ ಮತ್ತು ಮಾಹಿತಿ ಕಾರ್ಯಾಗಾರವು ಮಂಗಳೂರಿನ ಸೂರ್ಯ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ವಹಿಸಿದ್ದರು. ಉಪಾಧ್ಯಕ್ಷರಾದ ಓ.ಕೆ ಸಯೀದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಮುಅಲ್ಲಿಂ ಮೆಹರ್ ಜಾನ್ ರಾಜ್ಯ ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಎನ್‌ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲು ಸಭೆಯನ್ನು ಉದ್ಘಾಟಿಸಿದರು. ಚೆಯರ್ಮೆನ್ ಮುಫತ್ತಿಶ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಕೈಪಿಡಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ರಾಜ್ಯ ಕೋಶಾಧಿಕಾರಿ ಪುಂಡೂರು ಇಬ್ರಾಹೀಂ ಸಖಾಫಿ, ರಾಜ್ಯ ನಾಯಕರಾದ ಉರುಮಣೆ ಇಸ್ಮಾಯಿಲ್ ಸಅದಿ, ಇಬ್ರಾಹೀಂ ನಈಮಿ, ಮುಹಮ್ಮದ್ ಮದನಿ, ಅಬ್ದುಲ್ ಹಮೀದ್ ಸಅದಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳ, ರೇಂಜ್ ಗಳ ಮಿಶನರಿ ವಿಭಾಗದ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯ ನಾಯಕರಾದ ಇಬ್ರಾಹೀಂ ನಈಮಿ ಧನ್ಯವಾದ ಅರ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News