×
Ad

ಹವ್ವಾ ನಸೀಮಾ-ಲಯಾ ನಸೀಮಾರಿಗೆ ಜನಸಾಮಾನ್ಯರ ಬದುಕಿನ ಸಂಕಷ್ಟ ಪರಿಚಯಿಸಿದ ಸ್ಪೀಕರ್ ಯು.ಟಿ ಖಾದರ್

Update: 2024-04-12 10:19 IST

ಮಂಗಳೂರು: ಜನಸಾಮಾನ್ಯರ ಬದುಕಿನ ನೈಜ ಚಿತ್ರಣವನ್ನು ರಾಜ್ಯ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ತನ್ನ ಪುತ್ರಿ ಹವ್ವಾ ನಸೀಮಾ ಹಾಗೂ ಸಹೋದರ ಇಫ್ತಿಕಾರ್ ಅಲಿಯ ಪುತ್ರಿ ಲಯಾ ನಸೀಮಾ ಅವರಿಗೆ ಪರಿಚಯಿಸುವ ಅಪರೂಪದ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ‌.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಥಿಕವಾಗಿ ಹಿಂದುಳಿದ ಮತ್ತು ಇತರ ಆಯ್ದ ಸ್ತರದ ಜನರ ಮನೆಗೆ ಭೇಟಿ ನೀಡಿದ ಯುಟಿ ಖಾದರ್ ಜನಸಾಮಾನ್ಯರ ಬದುಕಿನ ಚಿತ್ರಣವನ್ನು‌ ಹವ್ವಾ ನಸೀಮಾ ಮತ್ತು‌ ಲಯಾ ನಸೀಮಾರಿಗೆ ಪರಿಚಯಿಸಿ ಇತರ ಜನಪ್ರತಿನಿಧಿಗಳು, ಸಮಾಜ ಸೇವಕರಿಗೆ ಮಾದರಿಯಾದರು.

ಉಳ್ಳಾಲ ತಾಲೂಕಿನ ಹರೇಕಳ ಗ್ರಾಪಂ ಸದಸ್ಯ ರಫೀಕ್ ಆಲಡ್ಕ ಮತ್ತು ಪಾವೂರು ಗ್ರಾಮದ ಇನೋಳಿ ಬಿ ಸೈಟ್ ನಿವಾಸಿ ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಬಳಿಕ ಕೋಟೆಕಾರು ಸಮೀಪದ ಬೀರಿ ಎಂಬಲ್ಲಿನ ರಫೀಕ್ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಮನೆ ಇಲ್ಲದೆ ಪರದಾಡುವ ಬಡಜನರು, ಅನಾರೋಗ್ಯದಿಂದ ಬಳಲುವವರ ಸಂಕಷ್ಟಕ್ಕೆ ಊರಿನ ಹಿರಿಯರೊಂದಿಗೆ ಹಾಗೂ ನಾಯಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಯು.ಟಿ ಖಾದರ್ ತಿಳಿಸಿದರು.

 







 


 


 


 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News