ಎದುರುಪದವು ಮಸೀದಿ-ಮದ್ರಸ ಸಮಿತಿಯಿಂದ ಸ್ಪೀಕರ್ ಯು.ಟಿ. ಖಾದರ್‌ಗೆ ಸನ್ಮಾನ
Update: 2026-01-18 19:28 IST
ಮಂಗಳೂರು, ಜ.18: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ 22ನೇ ಸ್ವಲಾತ್ ವಾರ್ಷಿಕದ ಪ್ರಯುಕ್ತ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್‌ರನ್ನು ಸನ್ಮಾನಿಸಲಾಯಿತು.
ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ಆಡಳಿತ ಮಂಡಳಿ ಅಧ್ಯಕ್ಷ ಎ.ಪಿ. ಮುಹಮ್ಮದ್ ಇಕ್ಬಾಲ್, ಮಸೀದಿಯ ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ, ಸದರ್ ಉಸ್ತಾದ್ ಝುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಜಾಬಿರ್ ಜೌಹರಿ ಕಲ್ಲಡ್ಕ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್., ಕಾರ್ಯದರ್ಶಿ ಸಾಜುದ್ದೀನ್, ಮಾಜಿ ಅಧ್ಯಕ್ಷ ಸೈಫುದ್ದೀನ್, ಮಾಜಿ ಉಪಾಧ್ಯಕ್ಷ ಮನ್ಸೂರ್, ಎಂ.ಡಿ. ಜಬ್ಬಾರ್, ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್, ಉದ್ಯಮಿ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಆರೀಫ್, ಕೋಶಾಧಿಕಾರಿ ಇಮ್ರಾನ್ ಅಲಿ ಮತ್ತಿತರರು ಉಪಸ್ಥಿತರಿದ್ದರು.